alex Certify ಕೇಳಿದ್ದು ಒಂದು ಡೆಬಿಟ್​ ಕಾರ್ಡ್…! ಆದ್ರೆ ಕೊಟ್ಟಿದ್ದು ಬರೋಬ್ಬರಿ 64 ಕಾರ್ಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಳಿದ್ದು ಒಂದು ಡೆಬಿಟ್​ ಕಾರ್ಡ್…! ಆದ್ರೆ ಕೊಟ್ಟಿದ್ದು ಬರೋಬ್ಬರಿ 64 ಕಾರ್ಡ್

ಎಂದಾದರೂ ನೀವು ನಿಮ್ಮ ಬ್ಯಾಂಕ್​​ನಲ್ಲಿ ಡೆಬಿಟ್​ ಕಾರ್ಡ್​ಗಾಗಿ ಅರ್ಜಿ ಸಲ್ಲಿಸಿದ್ದೀರಾ..? ಸಾಮಾನ್ಯವಾಗಿ ಡೆಬಿಟ್​ ಕಾರ್ಡ್​ಗಳು ಕಳೆದು ಹೋದಲ್ಲಿ ಇಲ್ಲವೇ ಹಾಳಾದಲ್ಲಿ ಬ್ಯಾಂಕ್​ಗೆ ಭೇಟಿ ನೀಡಿ ಇಲ್ಲವೇ ಬ್ಯಾಂಕ್​ನ ಸಹಾಯವಾಣಿ ಸಂಖ್ಯೆ ಮೂಲಕ ಹೊಸ ಕಾರ್ಡ್​ ಅರ್ಜಿ ಸಲ್ಲಿಸುತ್ತೇವೆ.

ಹೊಸ ಕಾರ್ಡ್​ ಬಂದ ಕೂಡಲೇ ಮುಂದಿನ ಕೆಲಸ ಅಂದರೆ ಪಿನ್​ ಜನರೇಟ್​ ಮಾಡೋದು. ಆದರೆ ಇದೆಲ್ಲ ಬ್ಯಾಂಕ್​ ಒಂದೇ ಡೆಬಿಟ್​ ಕಾರ್ಡ್​ನ್ನ ಕಳಿಸಿದಾಗ ಆರಾಮಾಗಿ ಮಾಡುವ ಕೆಲಸಗಳು. ಒಂದು ವೇಳೆ ನಿಮ್ಮ ಬ್ಯಾಂಕ್​ ದಿನಕ್ಕೊಂದರಂತೆ ಕಾರ್ಡ್​ಗಳನ್ನ ನಿಮಗೆ ಕಳುಹಿಸುತ್ತಲೇ ಹೋದರೆ ಏನು ಮಾಡ್ತೀರಾ..?

ಇಂತಹದ್ದೇ ಒಂದು ಪರಿಸ್ಥಿತಿಯಲ್ಲಿ ವ್ಯಕ್ತಿಯೊಬ್ಬರು ಸಿಲುಕಿದ್ದಾರೆ. ರೆಡಿಟ್​ನಲ್ಲಿ ತಮಗಾದ ಈ ವಿಚಿತ್ರ ಅನುಭವವನ್ನ ಫೋಟೋ ಮೂಲಕ ಶೇರ್​ ಮಾಡಿದ್ದಾರೆ. ಡೆಬಿಟ್​ ಕಾರ್ಡ್​ಗಾಗಿ ಅರ್ಜಿ ಸಲ್ಲಿಸಿದ್ದ ಈ ವ್ಯಕ್ತಿಗೆ ಬ್ಯಾಂಕ್​ ಬರೋಬ್ಬರಿ 64 ಹೊಸ ಡೆಬಿಟ್​ ಕಾರ್ಡ್​ಗಳನ್ನ ಕಳುಹಿಸಿಕೊಟ್ಟಿದೆ.

ಪೀಟರ್​ ಎಂಬವರು ಈ ರೀತಿ ಹೊಸ ಕಾರ್ಡ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಬ್ಯಾಂಕ್​ ಒಂದು ಕಾರ್ಡ್​ ಕಳಿಸೋದ್ರ ಬದಲಾಗಿ ದಿನಕ್ಕೊಂದರಂತೆ ಒಟ್ಟು 64 ಕಾರ್ಡ್​ಗಳನ್ನ ಕಳುಹಿಸುತ್ತಲೇ ಹೋಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...