alex Certify ನಾಯಿಮರಿ ಮಾಲೀಕರ ಪತ್ತೆ ಹಚ್ಚಲು ಬಳಕೆಯಾಯಿತು ಸಾಮಾಜಿಕ ಜಾಲತಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಯಿಮರಿ ಮಾಲೀಕರ ಪತ್ತೆ ಹಚ್ಚಲು ಬಳಕೆಯಾಯಿತು ಸಾಮಾಜಿಕ ಜಾಲತಾಣ

ಸಾಮಾಜಿಕ ಜಾಲತಾಣ ಇಂದು ಕೇವಲ ಮನರಂಜನೆಗೆ ಸೀಮಿತವಾಗಿಲ್ಲ ಮಾಹಿತಿ ವಿನಿಮಯ, ಕಲೆ-ಸಂಸ್ಕೃತಿ, ಪ್ರಚಾರ, ವ್ಯಾಪಾರ ಕ್ಷೇತ್ರಕ್ಕೂ ವಿಸ್ತರಣೆಯಾಗಿ ಅನಿವಾರ್ಯವಾಗುತ್ತಿದೆ.

ಇಲ್ಲೊಬ್ಬ ವ್ಯಕ್ತಿ ಕಳೆದುಹೋದ ನಾಯಿಮರಿ ಮಾಲೀಕನ ಹುಡುಕಾಟಕ್ಕೆ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡಿದ್ದಾನೆ.

ಜಪಾನಿನ ವ್ಯಕ್ತಿಯೊಬ್ಬ ದಾರಿಯಲ್ಲಿ ನಡೆದು ಹೋಗುತ್ತಿದ್ದಾಗ ಅನಾಥವಾದ ನಾಯಿಮರಿ ಆತನ ಕಣ್ಣಿಗೆ ಬಿದ್ದಿದೆ, ಅದನ್ನು ಮನೆಗೆ ಕರೆತಂದ ಆ ವ್ಯಕ್ತಿ ಅದರ ಮಾಲೀಕರ ಪತ್ತೆಹಚ್ಚಲು ಸಾಮಾಜಿಕ ಜಾಲತಾಣದಲ್ಲಿ ಸಹಾಯ ಕೇಳಿದ್ದಾನೆ.

ಆ ನಾಯಿಮರಿಗೆ ಲೂನಾ ಎಂದು ಹೆಸರಿಟ್ಟು ನಾಲ್ಕು ಫೋಟೋಗಳನ್ನು ತನ್ನ ಮರ್ಸಿ_ಕಾಮ್ ವಿಳಾಸದ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡು ಮರಿಯ ಮಾಲೀಕರ ಪತ್ತೆಗೆ ಮುಂದಾಗಿದ್ದಾರೆ.

ಅವನ ಪ್ರಯತ್ನಕ್ಕೆ ನಿರೀಕ್ಷೆ ಮೀರಿದ ಪ್ರತಿಕ್ರಿಯೆಗಳು ಬಂದಿವೆ, ಅನೇಕರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಕೆಲವರು ನಾಯಿಯ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿ ಅದು ನರಿ ಅಥವಾ ತೋಳದ ಮರಿ ಇರಬಹುದೆಂದು ಕಾಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...