alex Certify ಪುರುಷರಲ್ಲಿ ಈ ಕಾರಣಕ್ಕೆ ಹೆಚ್ಚಾಗ್ತಿದೆ ʼಬಂಜೆತನʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುರುಷರಲ್ಲಿ ಈ ಕಾರಣಕ್ಕೆ ಹೆಚ್ಚಾಗ್ತಿದೆ ʼಬಂಜೆತನʼ

ಇತ್ತೀಚಿನ ದಿನಗಳಲ್ಲಿ ತಡ ರಾತ್ರಿಯವರೆಗೆ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಬಳಸುವ ಪುರುಷರ ಸಂಖ್ಯೆ ಹೆಚ್ಚಾಗಿದೆ. ಮೊಬೈಲ್ ನಿಂದ ಹೊರ ಬರುವ ನೀಲಿ ಲೈಟ್ ಪುರುಷರ ವೀರ್ಯದ ಮೇಲೆ ಪ್ರಭಾವ ಬೀರುತ್ತಿದೆ. ಇದು ವೀರ್ಯದ ಗುಣಮಟ್ಟವನ್ನು ಹಾಳು ಮಾಡ್ತಿದೆ.

ಈ ಬಗ್ಗೆ ಅಮೆರಿಕಾದಲ್ಲಿ ಸಂಶೋಧನೆಯೊಂದು ನಡೆದಿದೆ. ಸಂಶೋಧನೆಗಾಗಿ ಸಂಶೋಧಕರು 21ರಿಂದ 59 ವರ್ಷದೊಳಗಿನ 116 ಪುರುಷರ ಮೇಲೆ ಅಧ್ಯಯನ ನಡೆಸಿದ್ದಾರೆ. ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ಪುರುಷರು ಗುಣಮಟ್ಟದ ವೀರ್ಯ ಕೊರತೆಯಿಂದ ಬಳಲುತ್ತಿದ್ದರು. ಈ ಎಲ್ಲ ಪುರುಷರಿಗೆ ನಿದ್ರೆಗೆ ಸಂಬಂಧಿಸಿದ ಪ್ರಶ್ನೆ ಹಾಗೂ ವೀರ್ಯದ ಗುಣಮಟ್ಟದ ಸಮಸ್ಯೆ ಬಗ್ಗೆ ಪ್ರಶ್ನೆ ಕೇಳಲಾಯ್ತು.

ಲೈಂಗಿಕ ಸಂಪರ್ಕಕ್ಕೂ 24 ಗಂಟೆ ಮುನ್ನ ಪೊಲೀಸರಿಂದ ಪಡೆಯಬೇಕು ಅನುಮತಿ

ರಾತ್ರಿ ಗ್ಯಾಜೆಟ್ ಗಳಿಂದ ಬಿಡುಗಡೆಯಾಗುವ ಬೆಳಕು ಪುರುಷರ ವೀರ್ಯದ ಮೇಲೆ ಪ್ರಭಾವ ಬೀರುತ್ತಿದೆ ಎಂಬುದನ್ನು ಪತ್ತೆ ಮಾಡಲಾಗಿದೆ. ಮೊಬೈಲ್ ಹಾಗೂ ಲ್ಯಾಪ್ ಟಾಪ್ ನಿಂದ ಹೊರ ಬರುವ ಬೆಳಕು ವೀರ್ಯದ ಗುಣಮಟ್ಟದ ಜೊತೆ ಬಿಡುಗಡೆ ಪ್ರಮಾಣದ ಮೇಲೂ ಪ್ರಭಾವ ಬೀರುತ್ತದೆ. ಮೊಬೈಲ್ ಸೇರಿದಂತೆ ಗ್ಯಾಜೆಟ್ ಕಡಿಮೆ ಬಳಸುವ ಹಾಗೂ ಉತ್ತಮ ನಿದ್ರೆ ಮಾಡುವ ಪುರುಷರ ವೀರ್ಯದ ಗುಣಮಟ್ಟ ಉತ್ತಮವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಗ್ಯಾಜೆಟ್ ಡಿಎನ್ಎ ಮೇಲೂ ಪ್ರಭಾವ ಬೀರಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...