alex Certify ಇದೇ ನೋಡಿ ಏಷ್ಯಾದ ಅತ್ಯಂತ ದುಬಾರಿ ಅಪಾರ್ಟ್​ಮೆಂಟ್…​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದೇ ನೋಡಿ ಏಷ್ಯಾದ ಅತ್ಯಂತ ದುಬಾರಿ ಅಪಾರ್ಟ್​ಮೆಂಟ್…​..!

ಹಾಂಗ್​ಕಾಂಗ್​ನಲ್ಲಿ ಐದು ಕೋಣೆಗಳ ಅಪಾರ್ಟ್​ಮೆಂಟ್​ನ್ನು ಬರೋಬ್ಬರಿ 4,29,48,01,809 ರೂಪಾಯಿಗೆ ಮಾರಾಟ ಮಾಡಲಾಗಿದೆ. ಇದು ಏಷ್ಯಾದಲ್ಲೇ ಈವರೆಗೆ ಮಾರಾಟವಾದ ಅತ್ಯಂತ ದುಬಾರಿ ಬೆಲೆಯ ಅಪಾರ್ಟ್​ಮೆಂಟ್​ ಆಗಿದೆ.

21 ಬೊರ್ರೆಟ್​ ರಸ್ತೆ ಯೋಜನೆಯ 23ನೇ ಮಹಡಿಯಲ್ಲಿರುವ 3378 ಚದರ ಅಡಿ ಫ್ಲ್ಯಾಟ್​​ನಲ್ಲಿ 5 ಮಲಗುವ ಕೋಣೆ ಸೇರಿದಂತೆ ವಿವಿಧ ಅದ್ಧೂರಿ ಸೌಕರ್ಯಗಳಿವೆ. ಅಲ್ಲದೇ ಇದರಲ್ಲಿ ಈಜುಕೊಳ, ಖಾಸಗಿ ಟೆರೆಸ್​ ಹಾಗೂ ಮೂರು ಪಾರ್ಕಿಂಗ್​ ಸ್ಥಳಗಳಿವೆ. ಬ್ಲೂಮ್​ಬರ್ಗ್​ ವರದಿ ಪ್ರಕಾರ ಅಪರಿಚಿತ ಖರೀದಿದಾರರು ಭಾರೀ ಮೊತ್ತಕ್ಕೆ ಈ ಅಪಾರ್ಟ್​ಮೆಂಟ್​ ಖರೀದಿ ಮಾಡಿದ್ದಾರೆ.

IPL AUCTION 2021: 14 ಕೋಟಿಗೆ ಮಾರಾಟವಾದ ರಿಚರ್ಡ್ ಸನ್ – ಡೇವಿಡ್ ಮಲನ್ ಗೆ ನಿರಾಶೆ

ಈ ಮೂಲಕ 2017ರಲ್ಲಿ ಮೌಂಟ್​​ ನಿಕೋಲ್ಸನ್​​ ಮಾರಿದ್ದ ಭಾರೀ ದಾಖಲೆಯನ್ನ ಅಪಾರ್ಟ್​ಮೆಂಟ್​ ಮುರಿದಿದೆ. ಅತಿ ಎತ್ತರದ ಕಟ್ಟಡಗಳನ್ನ ಹೊಂದಿರುವ ಈ ನಗರವು ಬಿಲಿಯನೇರ್​ ಉದ್ಯಮಿಗಳ ನೆಲೆಯಾಗಿದೆ. 2019ರ ವರದಿ ಪ್ರಕಾರ ಹಾಂಗ್​ಕಾಂಗ್​ನ್ನು ಅತ್ಯಂತ ದುಬಾರಿ ನಗರವೆಂದು ಪರಿಗಣಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...