ಹಾಂಗ್ಕಾಂಗ್ನಲ್ಲಿ ಐದು ಕೋಣೆಗಳ ಅಪಾರ್ಟ್ಮೆಂಟ್ನ್ನು ಬರೋಬ್ಬರಿ 4,29,48,01,809 ರೂಪಾಯಿಗೆ ಮಾರಾಟ ಮಾಡಲಾಗಿದೆ. ಇದು ಏಷ್ಯಾದಲ್ಲೇ ಈವರೆಗೆ ಮಾರಾಟವಾದ ಅತ್ಯಂತ ದುಬಾರಿ ಬೆಲೆಯ ಅಪಾರ್ಟ್ಮೆಂಟ್ ಆಗಿದೆ.
21 ಬೊರ್ರೆಟ್ ರಸ್ತೆ ಯೋಜನೆಯ 23ನೇ ಮಹಡಿಯಲ್ಲಿರುವ 3378 ಚದರ ಅಡಿ ಫ್ಲ್ಯಾಟ್ನಲ್ಲಿ 5 ಮಲಗುವ ಕೋಣೆ ಸೇರಿದಂತೆ ವಿವಿಧ ಅದ್ಧೂರಿ ಸೌಕರ್ಯಗಳಿವೆ. ಅಲ್ಲದೇ ಇದರಲ್ಲಿ ಈಜುಕೊಳ, ಖಾಸಗಿ ಟೆರೆಸ್ ಹಾಗೂ ಮೂರು ಪಾರ್ಕಿಂಗ್ ಸ್ಥಳಗಳಿವೆ. ಬ್ಲೂಮ್ಬರ್ಗ್ ವರದಿ ಪ್ರಕಾರ ಅಪರಿಚಿತ ಖರೀದಿದಾರರು ಭಾರೀ ಮೊತ್ತಕ್ಕೆ ಈ ಅಪಾರ್ಟ್ಮೆಂಟ್ ಖರೀದಿ ಮಾಡಿದ್ದಾರೆ.
IPL AUCTION 2021: 14 ಕೋಟಿಗೆ ಮಾರಾಟವಾದ ರಿಚರ್ಡ್ ಸನ್ – ಡೇವಿಡ್ ಮಲನ್ ಗೆ ನಿರಾಶೆ
ಈ ಮೂಲಕ 2017ರಲ್ಲಿ ಮೌಂಟ್ ನಿಕೋಲ್ಸನ್ ಮಾರಿದ್ದ ಭಾರೀ ದಾಖಲೆಯನ್ನ ಅಪಾರ್ಟ್ಮೆಂಟ್ ಮುರಿದಿದೆ. ಅತಿ ಎತ್ತರದ ಕಟ್ಟಡಗಳನ್ನ ಹೊಂದಿರುವ ಈ ನಗರವು ಬಿಲಿಯನೇರ್ ಉದ್ಯಮಿಗಳ ನೆಲೆಯಾಗಿದೆ. 2019ರ ವರದಿ ಪ್ರಕಾರ ಹಾಂಗ್ಕಾಂಗ್ನ್ನು ಅತ್ಯಂತ ದುಬಾರಿ ನಗರವೆಂದು ಪರಿಗಣಿಸಲಾಗಿದೆ.