alex Certify ಹಳೆ ಮಾಲೀಕರನ್ನು ಹುಡುಕಿಕೊಂಡು 100 ಕಿಮೀ ನಡೆದ ಒಂಟೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳೆ ಮಾಲೀಕರನ್ನು ಹುಡುಕಿಕೊಂಡು 100 ಕಿಮೀ ನಡೆದ ಒಂಟೆ…!

ಬೇರೊಂದು ಕುಟುಂಬಕ್ಕೆ ಮಾರಾಟ ಮಾಡಿದ ಬಳಿಕ, ತನ್ನ ಹಳೆಯ ಮಾಲೀಕರನ್ನು ಹುಡುಕಿಕೊಂಡು ನೂರಕ್ಕೂ ಹೆಚ್ಚು ಕಿಮೀ ನಡೆದುಕೊಂಡೇ ಹೋದ ಒಂಟೆಯೊಂದು ನೆಟ್ಟಿಗರ ಹೃದಯ ಗೆಲ್ಲುತ್ತಿದೆ.

ಈ ವೃದ್ಧ ಒಂಟೆಯು ಒಂದು ವಾರದ ಮಟ್ಟಿಗೆ ಇಷ್ಟು ದೂರ ನಡೆದುಕೊಂಡು ಹೋದ ಕಾರಣ ಬಹಳ ದಣಿದಿತ್ತು. ಕಳೆದ ಅಕ್ಟೋಬರ್‌ನಲ್ಲಿ ಈ ಒಂಟೆಯನ್ನು ಒಂಟೆ ಸಾಕುವವರಿಗೆ ಅದರ ಮಾಲೀಕರು ಮಾರಾಟ ಮಾಡಿಬಿಟ್ಟಿದ್ದರು. ಆದರೆ ಎಂಟು ತಿಂಗಳ ಒಳಗೇ ಈ ಒಂಟೆಯು ತನ್ನ ಮಾಲೀಕರತ್ತ ಮತ್ತೆ ಓಡಿ ಹೋಗಿದೆ.

ನೂರಾರು ಕಿಮೀ ಉದ್ದದ ತನ್ನ ಈ ಪಯಣದಲ್ಲಿ ಹೆದ್ದಾರಿಗಳು, ಬೇಲಿಗಳನ್ನೆಲ್ಲಾ ಹಾದು ಬಂದ ಈ ಒಂಟೆಯನ್ನು ಕಂಡ ಒಂಟೆ ಸಾಕುವವರೊಬ್ಬರು, ಅದಕ್ಕೆ ಆರೈಕೆ ಮಾಡಿ, ಮಾಲೀಕರ ತಲಾಶೆಯಲ್ಲಿದ್ದರು.

ತಮ್ಮನ್ನು ಅರಸಿ ಇಷ್ಟು ಸುದೀರ್ಘ ಹಾದಿ ನಡೆದು ಬಂದಿರುವುದನ್ನು ತಿಳಿದ ಒಂಟೆಯ ಹಳೆಯ ಮಾಲೀಕರು ಅದನ್ನು ಮರಳಿ ಪಡೆದುಕೊಂಡಿದ್ದಾರೆ. ಅದರ ಬದಲಾಗಿ ಮೂರು ವರ್ಷದ ಹೆಣ್ಣು ಒಂಟೆಯೊಂದನ್ನು ಎಕ್ಸ್‌ಚೇಂಚ್ ಮಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...