alex Certify ಗೆಳತಿ ಭೇಟಿಯಾಗಲು ಯುವಕ ಮಾಡಿದ ಸಾಹಸ ಕೇಳಿದ್ರೆ ದಂಗಾಗ್ತೀರಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೆಳತಿ ಭೇಟಿಯಾಗಲು ಯುವಕ ಮಾಡಿದ ಸಾಹಸ ಕೇಳಿದ್ರೆ ದಂಗಾಗ್ತೀರಾ…!

ಜೆಟ್​ ಸ್ಕೀ ಖರೀದಿ ಮಾಡಿದ ಸ್ಕಾಟಿಶ್​ ವ್ಯಕ್ತಿ ತನ್ನ ಗೆಳತಿಯನ್ನ ಭೇಟಿ ಮಾಡಲು ಲಾಕ್​ಡೌನ್​ ನಿಯಮ ಉಲ್ಲಂಘಿಸಿದ ಕಾರಣ ಆತನನ್ನ ಜೈಲಿಗಟ್ಟಲಾಗಿದೆ ಎಂದು ವರದಿಗಳು ತಿಳಿಸಿವೆ.

ದಕ್ಷಿಣ ಸ್ಕಾಟ್ಲೆಂಡ್​ನ ಐರ್​ಶೈರ್​​ನ ಡೇಲ್​ ಮೆಕ್​ಲಾಫ್ಲಾನ್​ ಸೆಪ್ಟೆಂಬರ್​​ನಲ್ಲಿ ಐರಿಶ್​​ ಸಮುದ್ರದಲ್ಲಿರುವ ದ್ವೀಪದಲ್ಲಿ ರೂಫರ್​ ಆಗಿ ಕೆಲಸ ಮಾಡುತ್ತಿದ್ದ ವೇಳೆ ತಮ್ಮ ಗೆಳತಿಯನ್ನ ಭೇಟಿ ಮಾಡಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ವಾರ್ಷಿಕ ಪ್ರವಾಸಿ ಮೋಟರ್​ ಸೈಕಲ್​ ರೇಸ್​ಗೆ ಹೆಸರುವಾಸಿಯಾದ ಈ ದ್ವೀಪದಲ್ಲಿ ಕೊರೊನಾ ವೈರಸ್​ ನಿರ್ಬಂಧದ ಅನುಸಾರ ಅನಿವಾಸಿಗಳಿಗೆ ಪ್ರಸ್ತುತ ದ್ವೀಪಕ್ಕೆ ಇಳಿಯಲು ವಿಶೇಷ ಅನುಮತಿಯನ್ನ ಪಡೆಯಬೇಕಾಗುತ್ತೆ.

ಆದರೆ ಈ ವಿಶೇಷ ಅನುಮತಿಯನ್ನ ಪಡೆಯದ ಮೆಕ್​​ ಜೆಟ್​ ಸ್ಕೀ ಒಂದನ್ನ ಖರೀದಿ ಮಾಡಿ ಸಮುದ್ರ ಮಾರ್ಗದ ಮೂಲಕ 40 ಕಿಲೋಮೀಟರ್​ ದೂರ ಸಾಗಿ ಗೆಳತಿಯನ್ನ ಭೇಟಿಯಾಗಿದ್ದಾನೆ.

ಗಡಿ ನಿಯಮ ಉಲ್ಲಂಘನೆ ಹಾಗೂ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಹಿನ್ನೆಲೆ ಆತನನ್ನ ಪೊಲೀಸರು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...