alex Certify 25 ವರ್ಷಗಳಲ್ಲಿ 21 ಬಾರಿ IVF ವಿಫಲ, 1 ಕೋಟಿ ಖರ್ಚು: ಕೊನೆಗೂ 54ನೇ ವಯಸ್ಸಿನಲ್ಲಿ ತಾಯಿಯಾಗಿದ್ದಾಳೆ ಈ ಮಹಿಳೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

25 ವರ್ಷಗಳಲ್ಲಿ 21 ಬಾರಿ IVF  ವಿಫಲ, 1 ಕೋಟಿ ಖರ್ಚು: ಕೊನೆಗೂ 54ನೇ ವಯಸ್ಸಿನಲ್ಲಿ ತಾಯಿಯಾಗಿದ್ದಾಳೆ ಈ ಮಹಿಳೆ…..!

ತಾಯ್ತನ ಅನ್ನೋದು ಮಹಿಳೆಯರ ಜೀವನದ ಮಹತ್ವದ ಘಟ್ಟ. ಮಗುವನ್ನು ಪಡೆಯಲು ಮಹಿಳೆ ಎಂಥಾ ತ್ಯಾಗಕ್ಕೆ ಬೇಕಾದ್ರೂ ಸಿದ್ಧಳಾಗ್ತಾಳೆ. ಆದರೆ ಕೆಲವೊಮ್ಮೆ ನೈಸರ್ಗಿಕವಾಗಿ ಗರ್ಭ ಧರಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಕೆಲವರು ಐವಿಎಫ್ ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಾರೆ.

ಇಲ್ಲೊಬ್ಬಳು ಮಹಿಳೆ ತನ್ನ 28 ನೇ ವಯಸ್ಸಿನಿಂದಲೂ ಗರ್ಭಿಣಿಯಾಗಬೇಕೆಂಬ ಹಂಬಲದಲ್ಲಿ ಸಾಕಷ್ಟು ಪ್ರಯತ್ನಪಟ್ಟಿದ್ದಾಳೆ. ಸ್ವಾಭಾವಿಕವಾಗಿ ಗರ್ಭಧರಿಸಲು ಸಾಧ್ಯವಾಗದೇ ಇದ್ದಾಗ IUI ಚಿಕಿತ್ಸೆಯನ್ನು ಪ್ರಯತ್ನಿಸಿದ್ದಾಳೆ. ಆದರೆ ಇದರಲ್ಲೂ ಯಶಸ್ಸು ಸಿಗಲಿಲ್ಲ.

ಆದ್ದರಿಂದ IVF ಮಾಡಲಾಯಿತು. ಆದರೆ ವಿಧಿಯ ಇಚ್ಛೆಯೇ ಬೇರೆಯಿತ್ತು. ಹಲವು ವರ್ಷಗಳ ಕಾಲ ಮಹಿಳೆ ಐವಿಎಫ್‌ ಚಿಕಿತ್ಸೆಯನ್ನು ಮುಂದುವರಿಸಿದ್ದಾಳೆ. ತಾನು ಗರ್ಭಿಣಿಯಾಗಬಹುದು ಅನ್ನೋ ನಿರೀಕ್ಷೆಯಲ್ಲೇ ಕಾಲ ಕಳೆದಿದ್ದಾಳೆ. 25 ವರ್ಷಗಳ ಕಾಲ ಆಕೆ 21 ಬಾರಿ IVF ಪ್ರಯತ್ನಿಸಿದ್ದಾಳೆ. ಇದಕ್ಕಾಗಿ ಸುಮಾರು 1 ಕೋಟಿ ರೂಪಾಯಿ ಖರ್ಚಾಗಿದೆ. ಆದರೆ 21 ಬಾರಿಯೂ ಐವಿಎಫ್‌ ವಿಫಲವಾಗಿತ್ತು. ಈಗ ಆ ಮಹಿಳೆಗೆ 54 ವರ್ಷ. ಕೊನೆಗೂ ಅಮ್ಮನಾಗಬೇಕೆಂಬ ಅವಳ ಬಯಕೆ ಈಡೇರಿದೆ. ಆ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಅಂದಹಾಗೆ ಇದು ಜಗತ್ತಿನ ಅಪರೂಪದ ಪ್ರಕರಣವಾಗಿದೆ.

ಆ ಮಹಿಳೆಯ ಹೆಸರು ಹೆಲೆನ್ ಡಾಲ್ಗ್ಲಿಸ್. ಗ್ಲಾಸ್ಗೋದ ನಿವಾಸಿ. ಸ್ಕಾಟ್ಲೆಂಡ್‌ನಲ್ಲಿ ಆಕೆ ಫರ್ಟಿಲಿಟಿ ಚಿಕಿತ್ಸೆಗೆ ಒಳಗಾಗಿದ್ದಾಳೆ. ಮೂರು ಬಾರಿ ಆಕೆಗೆ ಗರ್ಭಪಾತವೂ ಆಗಿದೆ. ಆದರೂ ಹೆಲೆನ್‌ ಧೈರ್ಯಗುಂದಲಿಲ್ಲ. ಯೋಗ, ಧ್ಯಾನ ಮತ್ತು ಆಹಾರ ಪದ್ಧತಿಯನ್ನೂ ಸುಧಾರಿಸಿಕೊಂಡಳು. ದಾನಿಗಳಿಂದ ಎಗ್‌ ಪಡೆದುಕೊಂಡು ಕೂಡ ಗರ್ಭಧಾರಣೆಗೆ ಪ್ರಯತ್ನಿಸಲಾಗಿತ್ತು. ಅದು ಕೂಡ ಯಶಸ್ವಿಯಾಗಿರಲಿಲ್ಲ. 10 ಉತ್ತಮ ಗುಣಮಟ್ಟದ ಎಗ್‌ಗಳನ್ನು ಕೆಲವೇ ದಿನಗಳಲ್ಲಿ ಕಸಿ ಮಾಡಲಾಯಿತು, ಆದರೆ ಅವೆಲ್ಲವೂ ನಾಶವಾದವು. ಅದರ ಫಲಿತಾಂಶವೂ ಶೂನ್ಯವಾಗಿತ್ತು.

ತಂದೆಯ ಮರಣ ಮತ್ತು ಹೊಸ ಜೀವನ

ಹೆಲೆನ್ ಅವರ ತಂದೆ ಸ್ಕಾಟ್ಲೆಂಡ್‌ನ ಮನೆಯಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಆಗ ಹೆಲೆನ್‌ಳ ತಾಯಿ, ತಂದೆಯ ಮರಣಕ್ಕೂ ಮೊದಲು ಮತ್ತೊಮ್ಮೆ ಪ್ರಯತ್ನಿಸಬೇಕೆಂದು ಹೇಳಿದರು. ಸಾವಿಗೂ ಮುನ್ನ ಹೆಲೆನ್‌ ತಂದೆ ಸ್ವರ್ಗದಿಂದ ನಿನಗೇನು ಕಳಿಸಲಿ ಎಂದು ಕೇಳಿದ್ದರಂತೆ. ದಯವಿಟ್ಟು ನನಗೆ ಮಗುವನ್ನು ಕಳುಹಿಸಿ ಎಂದು ಹೆಲೆನ್‌ ಬೇಡಿದ್ದಳು. ಅದಾಗಿ ಕೆಲವೇ ದಿನಗಳಲ್ಲಿ ತಂದೆ ಸಾವನ್ನಪ್ಪಿದ್ದರು. ಅಂತಿಮವಾಗಿ 54 ನೇ ವಯಸ್ಸಿನಲ್ಲಿ ಹೆಲೆನ್ ಮಗುವಿನ ತಾಯಿಯಾಗಿದ್ದಾಳೆ. ಈಗ ಕಳೆದ 25 ವರ್ಷಗಳಿಂದ ಅನುಭವಿಸಿದ ನೋವು ಮತ್ತು ಕಣ್ಣೀರನ್ನು ಮರೆತಿದ್ದೇನೆ ಎಂದಿರೋ ಆಕೆ, ಮಗುವನ್ನು ತಂದೆ ಸ್ವರ್ಗದಿಂದ ಕಳಿಸಿದ್ದಾರೆಂದು ನಂಬಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...