alex Certify ಬತ್ತಿ ಹೋದ ಕೆರೆ; 70 ವರ್ಷಗಳ ಬಳಿಕ ಕಣ್ಣಿಗೆ ಬಿದ್ದ ಊರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬತ್ತಿ ಹೋದ ಕೆರೆ; 70 ವರ್ಷಗಳ ಬಳಿಕ ಕಣ್ಣಿಗೆ ಬಿದ್ದ ಊರು

ಕೆರೆಯೊಂದರ ಒಳಗೆ ಮುಳುಗಿ ಹೋಗಿದ್ದ ಇಟಲಿಯ ಊರೊಂದು 71 ವರ್ಷಗಳ ಬಳಿಕ ಪತ್ತೆಯಾಗಿದೆ. ಇಟಲಿಯ ಪಶ್ಚಿಮ ಭಾಗದಲ್ಲಿರುವ ದಕ್ಷಿಣ ಟಿರೋಲ್ ಪ್ರದೇಶದ ರೆಸಿಯಾ ಹೆಸರಿನ ಈ ಕೃತಕ ಕೆರೆ ತಾತ್ಕಾಲಿಕವಾಗಿ ಬತ್ತಿಹೋಗಿರುವ ಕಾರಣ ಕ್ಯೂರನ್ ಹೆಸರಿನ ಊರು ಜನರ ಕಣ್ಣಿಗೆ ಬಿದ್ದಿದೆ.

1950ರಲ್ಲಿ ಜಲವಿದ್ಯುತ್‌ ಉತ್ಪಾದನಾ ಘಟಕವೊಂದರ ನಿರ್ಮಾಣಕ್ಕೆಂದು ಮುಳುಗಡೆಯಾಗುವ ಮುನ್ನ ಈ ಊರಿನಲ್ಲಿ ನೂರಾರು ಮಂದಿ ವಾಸಿಸುತ್ತಿದ್ದರು. ಅಣೆಕಟ್ಟೆ ಹಾಗೂ ಅದರ ಹತ್ತಿರದಲ್ಲೇ ಎರಡು ಕೆರೆಗಳ ನಿರ್ಮಾಣ ಮಾಡಿದ ಕಾರಣ ಕ್ಯೂರನ್‌ನ 160 ಮನೆಗಳಲ್ಲಿದ್ದ ಅಷ್ಟೂ ಗ್ರಾಮಸ್ಥರನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.

ಕರೆ ಮಾಡಿ ಸಹಾಯ ಕೇಳಿದ ಮಹಿಳೆ, ಮಂಚಕ್ಕೆ ಕರೆದ ಭೂಪ

ಈ ಕಳೆದುಹೋದ ಊರಿನ ಮನೆಗಳ ಮೆಟ್ಟಿಲುಗಳು, ಗೋಡೆಗಳು ಹಾಗೂ ನೆಲಂತಸ್ತುಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಲಾಗಿದ್ದು, ವೈರಲ್ ಆಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...