alex Certify ಆಫ್ರಿಕಾದಲ್ಲಿ ಅಪರೂಪದ ಹೊಳೆಯುವ ಹಲ್ಲಿ ಪತ್ತೆ ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಫ್ರಿಕಾದಲ್ಲಿ ಅಪರೂಪದ ಹೊಳೆಯುವ ಹಲ್ಲಿ ಪತ್ತೆ ..!

ಆಫ್ರಿಕಾದಲ್ಲಿ ವಿಜ್ಞಾನಿಗಳು ನಡೆಸಿದ ಅಧ್ಯಯನವೊಂದರಲ್ಲಿ ಪ್ರಕಾಶಮಾನವಾಗಿ ಹೊಳೆಯುವ ಸರಿಸೃಪಗಳನ್ನ ಕಂಡು ಹಿಡಿದಿದ್ದಾರೆ. ನಮೀಬಿಯಾದ ವಿಚಿತ್ರ ಮಾದರಿಯ ಹಲ್ಲಿಗಳು( ಗೆಕ್ಕೋಸ್​) ಕತ್ತಲೆಯಲ್ಲಿ ಪ್ರಕಾಶಮಾನವಾಗಿ ಹೊಳೆಯುತ್ತವೆ.

ವರದಿಗಳ ಪ್ರಕಾರ ಸರಿಸೃಪದಲ್ಲಿ ಈ ವಿಶೇಷವಾದ ಹೊಳೆಯುವ ರೀತಿಯ ಪಟ್ಟೆಗಳಿಂದಾಗಿ ಈ ಹಲ್ಲಿಗಳು ಇತರೆ ಹಲ್ಲಿಗಳಿಗಿಂತ ಭಿನ್ನವಾಗಿದೆ. ಮಾತ್ರವಲ್ಲದೇ ಈ ವಿಶೇಷ ಗುಣಗಳಿಂದಾಗಿ ಪರಭಕ್ಷಕ ಜೀವಿಗಳಿಂದಲೂ ತಮ್ಮನ್ನ ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತೆ.

ಈ ನಿರ್ದಿಷ್ಟ ಪ್ರಭೇದ ಅರೆ ಪಾರದರ್ಶಕ ಚರ್ಮವನ್ನ ಹೊಂದಿದೆ. ಇವುಗಳ ದೇಹದಲ್ಲಿನ ಮೂಳೆಗಳು ನೇರಳಾತೀತ ಬೆಳಕಿನಲ್ಲಿ ಹೊಳೆಯುತ್ತೆ. ಆಸ್ಟ್ರೇಲಿಯಾದಲ್ಲೂ ಕೆಲ ದಿನಗಳ ಹಿಂದೆ ನಡೆಸಿದ ಸಂಶೋಧನೆಯಲ್ಲಿ ಹೊಳೆಯುವ ಗೋಸುಂಬೆಗಳು ಕಾಣಸಿಕ್ಕಿದ್ದವು.

— Dr Mark D. Scherz (@MarkScherz) January 11, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...