alex Certify ಲಂಡನ್ ಬೀದಿಗೆ ಸಂತ ಗುರು ನಾನಕ್‌ ರ ಹೆಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಂಡನ್ ಬೀದಿಗೆ ಸಂತ ಗುರು ನಾನಕ್‌ ರ ಹೆಸರು

London Street in 'Little India' to be Renamed Guru Nanak Road, Desis Can't Keep Calm

ಲಂಡನ್‌:ಪಶ್ಚಿಮ ಲಂಡನ್ ನ ಹೆವ್ಲೊಕ್ ರಸ್ತೆಗೆ ಶೀಘ್ರದಲ್ಲಿ ಭಾರತೀಯ ಸಂತ ಗುರು ನಾನಕ್ ಅವರ ಹೆಸರನ್ನಿಡಲಾಗುತ್ತದೆ. ಗುರು ನಾನರ್ ಜಯಂತಿಯ ದಿನವಾದ ಸೋಮವಾರ ಎಲ್ಲಿಂಗ್ ಕೌನ್ಸಿಲ್ ನ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ.‌

ಅಗತ್ಯ ಕಾರ್ಯ ವಿಧಾನದ ಬಳಿಕ 2021 ರಲ್ಲಿ ಅಧಿಕೃತವಾಗಿ ರಸ್ತೆಗೆ ಮರು ನಾಮಕರಣ ನಡೆಯಲಿದೆ.‌ ಸದ್ಯ ಈ ರಸ್ತೆಗೆ ಇದುವರೆಗೆ 1857 ರ ಭಾರತೀಯ ದಂಗೆಯಲ್ಲಿ ಬ್ರಿಟಿಷ್ ಸೇನೆಯ ಜನರಲ್ ಆಗಿದ್ದ ಹೆನ್ರಿ ವೆವ್ಲೊಕ್ ಅವರ ಹೆಸರಿತ್ತು.

ಲಂಡನ್ ನಲ್ಲಿರುವ ಅತಿ ದೊಡ್ಡ ಗುರುದ್ವಾರ ಶ್ರೀ ಗುರು ಸಿಂಗ್ ಸಭಾ ಇದೇ ರಸ್ತೆಯಲ್ಲಿದೆ. ಅತಿ ಹೆಚ್ಚು ಸಿಖ್ ಜನಸಂಖ್ಯೆ ಇರುವ ಪ್ರದೇಶ ಇದಾಗಿದೆ. ಈ ವರ್ಷ ನಡೆದ “ದ ಬ್ಲ್ಯಾಕ್ ಲೈವ್ಸ್ ಮ್ಯಾಟರ್” ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪವಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...