alex Certify ಪ್ರಿಯತಮೆ ಪರೀಕ್ಷೆಯಲ್ಲಿ ಪಾಸ್ ಆದ ಪ್ರೇಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಿಯತಮೆ ಪರೀಕ್ಷೆಯಲ್ಲಿ ಪಾಸ್ ಆದ ಪ್ರೇಮಿ

ಲಾಕ್ ಡೌನ್ ವೇಳೆ ಜನರು ತಮಗಿಷ್ಟವಾದ ಕೆಲಸಗಳನ್ನು ಮಾಡಿದ್ದಾರೆ. ಆದ್ರೆ ಯುಕೆಯ ಯುವತಿಯೊಬ್ಬಳು ಲಾಕ್ ಡೌನ್ ಸಂದರ್ಭದಲ್ಲಿ ಮಾಡಿದ ಕೆಲಸ ಅಚ್ಚರಿ ಹುಟ್ಟಿಸುವಂತಿದೆ. ಯುವತಿ ರಿಲೇಷನ್ಶಿಪ್ ಪೋರ್ಟಲ್ ಒಂದರಲ್ಲಿ ಲಾಕ್ ಡೌನ್ ವೇಳೆ ತಾನು ಏನು ಮಾಡಿದ್ದೇನೆ ಎಂಬುದನ್ನು ಹೇಳಿದ್ದಾಳೆ.

ಯುವತಿ 16ನೇ ವರ್ಷದಲ್ಲಿರುವಾಗ ಪ್ರೀತಿಸಲು ಶುರು ಮಾಡಿದ್ದಳಂತೆ. ಈಗ ಪ್ರೀತಿ ಶುರುವಾಗಿ 6 ವರ್ಷ ಕಳೆದಿದೆ. ಅವ್ರ ಸಂಬಂಧ ಮೊದಲಿಗಿಂತ ಹೆಚ್ಚು ಗಟ್ಟಿಯಾಗಿದೆಯಂತೆ. ಅದ್ರ ಗುಟ್ಟೇನು ಎಂಬುದನ್ನು ಯುವತಿ ಹೇಳಿದ್ದಾಳೆ. ಆರಂಭದಲ್ಲಿ ಒಂದೇ ನಗರದಲ್ಲಿದ್ದ ಯುವತಿ ಹಾಗೂ ಆಕೆ ಪ್ರೇಮಿ ಜಾರ್ಜ್ ವಾರಾಂತ್ಯದಲ್ಲಿ ಸಿಗ್ತಿದ್ದರಂತೆ. ನಂತ್ರ ಜಾರ್ಜ್ ಕೆಲಸಕ್ಕಾಗಿ ಬೇರೆ ಊರಿಗೆ ಹೋಗಿದ್ದರಿಂದ ಇಬ್ಬರು ವಾರಾಂತ್ಯದಲ್ಲೂ ಸಿಗಲು ಆಗ್ತಿರಲಿಲ್ಲವಂತೆ.

ಓದಿನ ಜೊತೆ ಪಾರ್ಟ್ ಟೈಂ ಜಾಬ್ ಮಾಡ್ತಿದ್ದ ಯುವತಿ ಲಾಕ್ ಡೌನ್ ವೇಳೆ ಕೆಲಸ ಕಳೆದುಕೊಂಡಳಂತೆ. ರೂಮ್ ಬಾಡಿಗೆ, ಬಟ್ಟೆ, ಹೊಟ್ಟೆಗೆ ಕಷ್ಟವಾಗ್ತಿರುವುದನ್ನು ತಿಳಿದ ಜಾರ್ಜ್, ತನ್ನ ಜೊತೆ ಬಂದಿರಲು ಸಲಹೆ ನೀಡಿದ್ದನಂತೆ. ಈವರೆಗೆ ಯುವತಿ ಒಂದು ವಾರಕ್ಕಿಂತ ಹೆಚ್ಚು ಕಾಲ ಜಾರ್ಜ್ ಜೊತೆ ಇರಲಿಲ್ಲವಂತೆ. ಈ ಬಾರಿ ಅನಿವಾರ್ಯವಾಗಿ ಒಪ್ಪಿಕೊಂಡಿದ್ದಳಂತೆ.

ಚಳಿಗಾಲದ ಒಣ ಚರ್ಮ ಸಮಸ್ಯೆಯೇ…? ಟ್ರೈ ಮಾಡಿ ‘ಅರಿಶಿನ ಫೇಸ್ ಪ್ಯಾಕ್’

ಓದು ಮುಗಿಯುವವರೆಗೆ ಇಲ್ಲಿರ್ತೇನೆ. ಮುಗಿದ ನಂತ್ರ ನೀನು ಇಷ್ಟವಾದ್ರೆ ಇಲ್ಲೇ ವಾಸ ಮುಂದುವರೆಸುತ್ತೇನೆ. ಇಲ್ಲವಾದ್ರೆ ಬೇರೆ ಕಡೆ ವಾಸ ಮಾಡುತ್ತೇನೆ ಎಂದಿದ್ದಳಂತೆ. ಆದ್ರೆ ಲಾಕ್ ಡೌನ್ ಆಕೆ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದೆಯಂತೆ. ಇಬ್ಬರು ಕೆಲಸವನ್ನು ಹಂಚಿಕೊಂಡು ಮಾಡ್ತೆವೆ. ಸಣ್ಣ ಪುಟ್ಟ ಜಗಳಗಳ ಮಧ್ಯೆ ಜಾರ್ಜ್ ಬಿಟ್ಟಿರುವುದು ಕಷ್ಟವಾಗಿದೆ ಎಂದು ಯುವತಿ ಹೇಳಿದ್ದಾಳೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...