alex Certify ಲಾಕ್ ‌ಡೌನ್‌ ನಲ್ಲೂ ಬಿಡುವಿಲ್ಲದೆ ಮುಂದುವರೆದ ’ದಾನ’ ಕಾರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ‌ಡೌನ್‌ ನಲ್ಲೂ ಬಿಡುವಿಲ್ಲದೆ ಮುಂದುವರೆದ ’ದಾನ’ ಕಾರ್ಯ

ತನ್ನ ವೀರ್ಯಾಣುಗಳನ್ನು ದಾನಿ ಮಾಡಿ 150 ಮಕ್ಕಳಿಗೆ ಅಪ್ಪನಾಗಿರುವ ’ದಾನಿ’ಯೊಬ್ಬ ತನ್ನ ಈ ’ದಾನ’ವನ್ನು ಕೋವಿಡ್‌-19 ಲಾಕ್‌ಡೌನ್ ಅವಧಿಯಲ್ಲೂ ಸಹ ಮುಂದುವರೆಸಿದ್ದು, ಇದೇ ಅವಧಿಯಲ್ಲಿ ಆರು ಮಕ್ಕಳನ್ನು ಭೂಮಿಗೆ ತರಲು ನೆರವಾಗಿದ್ದಾನೆ.

ಜೋ ಡೋನರ್‌ ಎಂದು ಹೆಸರಿನಲ್ಲೇ ದಾನಿಯಾಗಿಬಿಟ್ಟಿರುವ ಈತನ ಮಕ್ಕಳನ್ನು ಸದ್ಯ ಐದು ಮಹಿಳೆಯರು ತಮ್ಮ ಹೊಟ್ಟೆಯಲ್ಲಿ ಹೊರುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆಯೇ ಸಾಗಿದಲ್ಲಿ 2020ರ ಅಂತ್ಯಕ್ಕೆ 10 ಮಕ್ಕಳಿಗೆ ತಂದೆಯಾಗಲಿದ್ದಾನೆ ಈ ಡೋನರ್‌.

ತನ್ನೀ ದಾನ ಕಾರ್ಯದ ನಿಮಿತ್ತ ಅರ್ಜೆಂಟೀನಾಗೆ ತೆರಳಿದ್ದ ಡೋನರ್‌, ಅಲ್ಲಿಯೇ ಲಾಕ್‌ಡೌನ್‌ ಆಗಿದ್ದರು. ಈ ಅವಧಿಯಲ್ಲೂ ಸಹ ತನ್ನ ಕೆಲಸವನ್ನು ಚೆನ್ನಾಗಿ ಮಾಡಿ, ಇದೀಗ ಲಂಡನ್‌ಗೆ ತಲುಪಿರುವ ಈತ ಅಲ್ಲಿ ಇನ್ನೂ ಐವರು ಮಹಿಳೆಯರನ್ನು ಭೇಟಿ ಮಾಡಲಿದ್ದಾರಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...