ಜರ್ಮನಿ: ಅಳಿಲು ಈ ಕುಟುಂಬದ ಪ್ರತಿ ದಿನದ ಅತಿಥಿ.
ಜರ್ಮನಿಯ ಮನೆಯೊಂದಕ್ಕೆ ಅಳಿಲು ಪ್ರತಿ ದಿನ ಬೆಳಗ್ಗೆ, ಕೆಲವೊಮ್ಮೆ ಸಂಜೆಯೂ ಬಂದು ಹೋಗುತ್ತದೆ ಮಾತ್ರವಲ್ಲ. ಅವರ ಕೈಯಲ್ಲಿ ಸೂರ್ಯಕಾಂತಿ ಬೀಜ ತಿಂದು ಹೋಗುತ್ತದೆ.
ಅಳಿಲಿಗಾಗೇ ಆ ಮನೆಯ ಮಹಿಳೆ ಬಾಲ್ಕನಿ ಮೇಲೆ ಸಣ್ಣ ಟೇಬಲ್ ಹಾಗೂ ಕಾಫಿ ಮಗ್ ಇಟ್ಟಿದ್ದಾರೆ. ಅದರಲ್ಲಿ ಸೂರ್ಯಕಾಂತಿ ಬೀಜ ತುಂಬಿಡುತ್ತಾರೆ. ಅದು ಬಂದು ತಿಂದು ಎಲ್ಲೆಡೆ ಸುತ್ತಾಡಿ ಹೋಗುತ್ತದೆ.
ಹಾಂ ಪುಟ್ಟ ಅಳಿಲಿನ ಜತೆ ಆ ಮನೆಯ ದೊಡ್ಡ ಬಾಂಧವ್ಯ ಹೇಗಿದೆ ಎಂದರೆ, ಮನೆಯವರು ಅದಕ್ಕೆ ಮೇಡಮ್ ಎಂದು ಹೆಸರಿಟ್ಟಿದ್ದಾರೆ.
ರಾಯಿಟರ್ಸ್ ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದು, ನೆಟ್ಟಿಗರು ಸಾಕಷ್ಟು ಕಮೆಂಟ್ ಹಾಕಿದ್ದಾರೆ. ಒಬ್ಬರು “ಅಳಿಲು ತುಂಬಾ ಮಾನವ ಸ್ನೇಹಿ. ಆಹಾರ ಕೊಟ್ಟರೆ ನಮ್ಮ ಹಿಂದೇ ಬರುತ್ತದೆ” ಎಂದು ಕಮೆಂಟ್ ಮಾಡಿದ್ದಾರೆ.