alex Certify ಎಟಿಎಂನಲ್ಲಿ ಅಚಾನಕ್ಕಾಗಿ ಬಂತು ಹಣ; ಪುಟ್ಟ ಹುಡುಗನ ಪ್ರಾಮಾಣಿಕತೆಗೆ ಒಲಿದ ಬಹುಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಟಿಎಂನಲ್ಲಿ ಅಚಾನಕ್ಕಾಗಿ ಬಂತು ಹಣ; ಪುಟ್ಟ ಹುಡುಗನ ಪ್ರಾಮಾಣಿಕತೆಗೆ ಒಲಿದ ಬಹುಮಾನ

ಪುಕ್ಕಟೆಯಾಗಿ ಸಿಗುವ ಯಾವುದನ್ನೂ ಬಿಟ್ಟುಕೊಡದ ಕಾಲವಿದು. ಅಂತದ್ದರಲ್ಲಿ ಹನ್ನೊಂದು ವರ್ಷದ ಪುಟ್ಟ ಬಾಲಕನೊಬ್ಬ ತನಗೆ ಅಚಾನಕ್ಕಾಗಿ ಸಿಕ್ಕ ನಾನೂರು ಪೌಂಡ್ ಹಣವನ್ನು ಸಂಬಂಧಪಟ್ಟವರಿಗೆ ತಲುಪುವಂತೆ ಮಾಡಿ ಗಮನ ಸೆಳೆದಿದ್ದಾನೆ.

ಮ್ಯಾಂಚೆಸ್ಟರ್ ಬಳಿಯ ಸ್ವಿಂಟನ್‌ನಲ್ಲಿರುವ ಅಸ್ಡಾ ಎಂಬ ಶಾಪಿಂಗ್ ಸೆಂಟರ್‌ನಲ್ಲಿ ಜ್ಯಾಕ್ ಗ್ರೀನ್ಹಾಲ್‌ ಎಂಬ ಶಾಲಾ ಬಾಲಕ ಬೇಸರ ಕಳೆಯಲು ತಮಾಷೆ ಹಾಗೂ ಕುತೂಹಲದಿಂದ ಎಟಿಎಂ ಬಟನ್‌ಗಳನ್ನು ಒತ್ತುತ್ತಾ ನಿಂತಿದ್ದ, ಅಚ್ಚರಿ ಎಂಬಂತೆ ಈ ವೇಳೆ ನಾಲ್ಕು ನೂರು ಪೌಂಡ್ ಹಣ ಬಂದಿದೆ.

ಆತ ತಕ್ಷಣವೇ ಆತ ಭದ್ರತಾ ಸಿಬ್ಬಂದಿಯನ್ನು ಶೀಘ್ರವಾಗಿ ಎಚ್ಚರಿಸಿ, ಎಟಿಎಂನಿಂದ ಹಣ ಬರುವ ವಿಷಯ ಗಮನಕ್ಕೆ ತಂದಿದ್ದಾನೆ.

ಫೇಸ್​ ಬುಕ್​ನಲ್ಲಿ ಶುರುವಾದ ಪ್ರೀತಿ ಪೊಲೀಸ್​ ಠಾಣೆಯಲ್ಲಿ ಅಂತ್ಯ..!

ಹುಡುಗನ ಚಿಂತನೆ ಮತ್ತು ಪ್ರಾಮಾಣಿಕತೆ ಅಲ್ಲಿದ್ದ ಎಲ್ಲರ ಮನ ಗೆದ್ದಿತು. ಶಾಪಿಂಗ್ ಸೆಂಟರ್ ಕಾರ್ಡ್ ಉಡುಗೊರೆ ಕಾರ್ಡ್ ನೀಡಲು ನಿರ್ಧರಿಸಿತು. ಹಾಗೆಯೇ ಪಟ್ಟಣದ ಸ್ಥಳೀಯ ಪತ್ರಿಕೆಗಳಲ್ಲಿ ವರದಿಯೂ ಆಯಿತು.

ಲಿಂಡ್ಸೆ ಡಾಸನ್ ಎಂಬ ಓದುಗ ಬಾಲಕನ ಬಗ್ಗೆ ಪ್ರಭಾವಿತರಾಗಿ ಪ್ರಶಸ್ತಿ ನೀಡಲು ಹಣ ಸಂಗ್ರಹಿಸುವ ಸಲುವಾಗಿ ಜಾಲತಾಣದಲ್ಲಿ ‘ಗೋಫಂಡ್‌ಮೆ’ ಪುಟ ತೆರೆದರು.ಇಲ್ಲಿಯವರೆಗೆ, ಪುಟವು 50 ಪೌಂಡ್ ಸಂಗ್ರಹಿಸಿದೆ.

ಇಷ್ಟು ದೊಡ್ಡ ಪ್ರತಿಫಲ ನಿರೀಕ್ಷಿಸದ ಕಾರಣ ಬಾಲಕನಿಗೆ ಆಶ್ಚರ್ಯವಾಗಿದೆ. ಎಷ್ಟೋ ಜನರು ದಾನ ಮಾಡಿರುವುದು ನನಗೆ ಆಶ್ಚರ್ಯವಾಗಿದೆ ಎಂದು ಆತ ಹೇಳಿಕೊಂಡಿದ್ದು, ಸಂಗ್ರಹಿಸಿದ ಹಣವನ್ನು ಹೊಸ ಆಟಿಕೆ ಖರೀದಿಸಲು ಬಳಸಲು ಮತ್ತು ಲಾಕ್‌ಡೌನ್ ವೇಳೆ ಸಹಾಯ ಮಾಡಿದ ಅಜ್ಜನಿಗೆ ಪುಸ್ತಕ, ಫುಟ್‌ಬಾಲ್ ಸಿಹಿತಿಂಡಿಗಳು ಮತ್ತು ಚಾಕೊಲೇಟ್ ಬಾರ್ ಖರೀದಿಸಲು ಬಳಸಿದ್ದಾನಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...