alex Certify ʼಕಾಂಗರೂʼ ಕುರಿತ ಕುತೂಹಲಕಾರಿ ಅಂಶ ಸಂಶೋಧನೆಯಲ್ಲಿ ಬಹಿರಂಗ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕಾಂಗರೂʼ ಕುರಿತ ಕುತೂಹಲಕಾರಿ ಅಂಶ ಸಂಶೋಧನೆಯಲ್ಲಿ ಬಹಿರಂಗ..!

ನಾಯಿಗಳಂತೆಯೇ ಕಾಂಗರೂಗಳು ಸಹ ಮಾನವರ ಜೊತೆ ಸಂವಹನ ಮಾಡಬಲ್ಲವು ಎಂದು ಸಂಶೋಧಕರು ಅಧ್ಯಯನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಈ ಅಧ್ಯಯನಕ್ಕೆ ಸೆರೆಮನೆಯಲ್ಲಿದ್ದ 11 ಕಾಂಗರೂಗಳನ್ನ ಬಳಸಿಕೊಳ್ಳಲಾಗಿತ್ತು. ಇವುಗಳಲ್ಲಿ ತಿನ್ನಲು ಪೆಟ್ಟಿಗೆಯೊಂದರಲ್ಲಿ ಆಹಾರವನ್ನ ನೀಡಲಾಗಿತ್ತು. ಇದರಲ್ಲಿ 10 ಕಾಂಗರೂಗಳು ಆಹಾರದ ಪೆಟ್ಟಿಗೆಯನ್ನ ತೆಗೆಯಲು ಸಾಧ್ಯವಾಗದಿದ್ದಾಗ ಸಂಶೋಧಕರ ಮುಖವನ್ನೇ ನೋಡಿವೆ.

9 ಕಾಂಗರೂಗಳು ಮನುಷ್ಯರನ್ನ ಹಾಗೂ ಪಾತ್ರೆಯನ್ನ ನೋಡಿವೆ.ಈ ಮೂಲಕ ಆಹಾರದ ಪೆಟ್ಟಿಗೆ ತೆಗೆದುಕೊಡುವಂತೆ ಸನ್ನೆ ಮಾಡಿವೆ.

ಕಾಡು ಪ್ರಾಣಿಗಳು ಈ ರೀತಿ ಸಂವಹನ ನಡೆಸಬಲ್ಲವು ಎಂಬುದನ್ನ ನಾವು ನಿಜವಾಗಿಯೂ ನಿರೀಕ್ಷಿಸಿರಲಿಲ್ಲ ಎಂದು ಐರಿಶ್​ ಸಂಶೋಧಕ ಅಲನ್​ ಮ್ಯಾಕ್​ ಎಲಿಗಾಟ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...