ಚಳಿಗಾಲದ ಪರಿಣಾಮ ಅಮೆರಿಕದ ಮಹಾಸರೋವರ ಮಿಷಿಗನ್ನ ನೀರು ಹೆಪ್ಪುಗಟ್ಟಿದ್ದು, ಅದರ ಮೇಲ್ಮೈನಲ್ಲಿ ಮಂಜುಗಡ್ಡೆಯ ತುಂಡುಗಳು ಕಾಣಿಸಿಕೊಳ್ಳುತ್ತಿವೆ.
ಬ್ಯಾಸ್ಕೆಟ್ಬಾಲ್ ಆಟಗಾರ ರೆಕ್ಸ್ ಚಾಪ್ಮನ್ ಈ ಮಿಷಗನ್ ಮಹಾಸರೋವರದ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದು, ಅದೀಗ 27 ಲಕ್ಷ ವೀವ್ಸ್ ಕಂಡುಕೊಂಡಿದೆ.
ಸಮುದ್ರದಾಳದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿ
ಸರೋವರದ ಸುತ್ತಲಿನ ಪ್ರದೇಶದಲ್ಲಿ ಕೇಳಿ ಬರುವ ಸ್ವಾಭಾವಿಕ ಶಬ್ದ ಕ್ಯಾಮೆರಾದ ಮೈಕ್ರೋಫೋನ್ಗೆ ಅಪ್ಪಳಿಸುತ್ತಿದ್ದು, ಹಿನ್ನೆಲೆಯಲ್ಲಿ ನಸುಗಪ್ಪಿನ ಆಗಸದ ನಡುವೆ ಸೂರ್ಯನ ಸುಳಿವೇ ಇಲ್ಲದಂತೆ ಇರುವ ದೃಶ್ಯ ನೋಡಬಹುದಾಗಿದೆ. ಮಂಜುಗಡ್ಡೆಯ ಮುರಿದ ಚೂರುಗಳ ಜೊತೆಗೆ ಸರೋವರದ ನೀರಿನ ಅಲೆಗಳ ಅಬ್ಬರವನ್ನೂ ಸಹ ವಿಡಿಯೋದಲ್ಲಿ ಕೇಳಬಹುದಾಗಿದೆ.