alex Certify 14 ಮರಿಗಳಿಗೆ ಜನ್ಮ ನೀಡಿ ದಾಖಲೆ ಮಾಡಿದ ಲ್ಯಾಬ್ರಡಾರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

14 ಮರಿಗಳಿಗೆ ಜನ್ಮ ನೀಡಿ ದಾಖಲೆ ಮಾಡಿದ ಲ್ಯಾಬ್ರಡಾರ್…!

ಬೆಲ್ಲಾ ಎಂಬ ಆರು ವರ್ಷದ ಲ್ಯಾಬ್ರಡಾರ್ 14 ಮರಿಗಳಿಗೆ ಒಟ್ಟಿಗೆ ಜನ್ಮ ನೀಡಿದ್ದು, ಇದು ಅತಿದೊಡ್ಡ ಜನನೋತ್ಸವ ಎನ್ನಲಾಗಿದೆ.

ಹಾಜೆಲ್ ಹೆಡ್ಜ್ ಎಂಬುವರು ತಮ್ಮ ನಾಯಿ ಇಷ್ಟೊಂದು ಮರಿ ಹಾಕಿ ನೋಡಿ ದಿಗ್ಭ್ರಾಂತರಾಗಿದ್ದಾರೆ.‌ ನೊಂದಾಯಿತ ನಾಯಿ ಬ್ರೀಡರ್ ಆಗಿರುವ ಅವರು, 6ರಿಂದ 8 ಮರಿ ಜನಿಸಬಹುದೆಂದು ನಿರಿಕ್ಷಿಸಿದ್ದರಂತೆ.

ನಾಲ್ಕು ಕಪ್ಪು ಬಣ್ಣದ ಗಂಡು, ನಾಲ್ಕು ಕಪ್ಪು ಬಣ್ಣದ ಹೆಣ್ಣು, ಮೂರು ಹಳದಿ ಬಣ್ಣದ ಗಂಡು, ಮೂರು ಹಳದಿ ಬಣ್ಣದ ಹೆಣ್ಣು ಮರಿ ಜನನವಾಗಿದೆ. ಕೆನಲ್ ಕ್ಲಬ್ ನ ಸದಸ್ಯ ಹಳದಿ ಬಣ್ಣದ ಸ್ಕೂಬಿ ಈ ಮರಿಗಳ ತಂದೆಯಂತೆ.

ಇಂಗ್ಲೆಂಡ್ ನಲ್ಲಿ ಒಮ್ಮೆಲೆ ನಾಯಿಯೊಂದು ಇಷ್ಟೊಂದು ಮರಿ ಹಾಕಿದ್ದು ಇದು ಮೊದಲಿರಬಹುದು ಎಂದು ಹೆಡ್ಜ್ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...