alex Certify ಬಹುತೇಕ ಪುರುಷರು ಗೂಗಲ್ ನಲ್ಲಿ ಸರ್ಚ್ ಮಾಡ್ತಾರೆ ಈ ವಿಷ್ಯ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಹುತೇಕ ಪುರುಷರು ಗೂಗಲ್ ನಲ್ಲಿ ಸರ್ಚ್ ಮಾಡ್ತಾರೆ ಈ ವಿಷ್ಯ..!

ಇತ್ತೀಚಿನ ದಿನಗಳಲ್ಲಿ ಗೂಗಲ್ ಸರ್ಚ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಪ್ರತಿಯೊಂದು ಸಮಸ್ಯೆ,‌ ಪ್ರಶ್ನೆಗೂ ಜನರು ಗೂಗಲ್ ನಲ್ಲಿ ಹುಡುಕಾಟ ನಡೆಸುತ್ತಾರೆ. Frommars.com ವೆಬ್‌ಸೈಟ್, ಪುರುಷರ ಮನಸ್ಸನ್ನು ತಿಳಿಯುವ ಪ್ರಯತ್ನ ಮಾಡಿದೆ. ಗೂಗಲ್ ನಲ್ಲಿ ಪುರುಷರು ಅತಿ ಹೆಚ್ಚು ಸರ್ಚ್ ಮಾಡುವ ವಿಷ್ಯ ಯಾವುದು ಎಂಬುದನ್ನು ಪತ್ತೆ ಮಾಡಲಾಗಿದೆ.

ಕೆಲವು ಪುರುಷರು ತಮ್ಮ ಫಿಟ್‌ನೆಸ್‌ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ವ್ಯಾಯಾಮ ಮುಗಿದ ಕೂಡಲೇ ಪ್ರೋಟೀನ್ ತೆಗೆದುಕೊಳ್ಳಬೇಕೆ ಅಥವಾ ಬೇಡವೇ ಎಂಬುದನ್ನು ತಿಳಿಯಲು ಬಯಸ್ತಾರೆ. ಹಾಗೆ ಯಾವ ಪ್ರೋಟೀನ್ ಬೆಸ್ಟ್ ಎಂಬುದನ್ನೂ ತಿಳಿಯುವ ಪ್ರಯತ್ನ ನಡೆಸುತ್ತಾರೆ.

ಜುಟ್ಟ ಕಟ್ಟಿದ್ರೆ ಅಥವಾ ಟೋಪಿ ಹಾಕಿದ್ರೆ ಕೂದಲು ಉದುರುತ್ತಾ ಎಂಬ ಪ್ರಶ್ನೆಗೂ ಉತ್ತರ ಹುಡುಕುವ ಪ್ರಯತ್ನ ನಡೆಸುತ್ತಾರೆ.  ಪ್ರತಿ ವರ್ಷ ಸರಾಸರಿ 52,100 ಜನರು ಗೂಗಲ್‌ನಲ್ಲಿ ಈ ವಿಷ್ಯದ ಬಗ್ಗೆ ಹುಡುಕಾಟ ನಡೆಸುತ್ತಾರಂತೆ.

ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಕಾಡುವುದು ಸಾಮಾನ್ಯ. ಆದರೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯಿರುವ ಪುರುಷರು, ತಮಗೆ ಸ್ತನ ಕ್ಯಾನ್ಸರ್ ಬರಬಹುದೆ ಎಂಬುದನ್ನು ತಿಳಿಯಲು ಬಯಸುತ್ತಾರೆ. ಈ ಕುರಿತು 61,200 ಜನರು ಗೂಗಲ್‌ನಲ್ಲಿ ಹುಡುಕಿದ್ದಾರೆ. ಪುರುಷರಲ್ಲಿ ಇತರ ಕ್ಯಾನ್ಸರ್ ಗಳಿಗಿಂತ ಸ್ತನ ಕ್ಯಾನ್ಸರ್ ತುಂಬಾ ಭಿನ್ನವಾಗಿರುತ್ತದೆ. 60 ವರ್ಷದ ನಂತರ ಪುರುಷರು ಈ ಸಮಸ್ಯೆಯಿಂದ ಬಳಲುತ್ತಾರೆ. ಆರಂಭಿಕ ರೋಗ ಲಕ್ಷಣವನ್ನು ತಿಳಿಯುವುದು ಬಹಳ ಮುಖ್ಯವಾಗುತ್ತದೆ.

ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿಯಿರುವ ಪುರುಷರು ಶೇವಿಂಗ್ ಬಗ್ಗೆ ತಿಳಿದುಕೊಳ್ಳಲು ಇಚ್ಛಿಸುತ್ತಾರೆ. ಶೇವಿಂಗ್ ನಂತ್ರ ಹೆಚ್ಚಿನ ಕೂದಲು ಬೆಳೆಯುವ ಸಾಧ್ಯತೆಯಿದೆಯಾ ಎಂಬುದನ್ನು ಸರ್ಚ್ ಮಾಡ್ತಾರೆ. ಪ್ರತಿವರ್ಷ 68,400 ಜನರು ಈ ಬಗ್ಗೆ ಹುಡುಕಾಟ ನಡೆಸಿದ್ದಾರೆ.

ಪುರುಷರು ತಮ್ಮ ಲೈಂಗಿಕತೆಯ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ. ಪ್ರತಿವರ್ಷ 68,600 ಜನರು ನಪುಂಸಕತೆಯ ಲಕ್ಷಣ ಹೊಂದಿದ್ದಾರಾ ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಸುತ್ತಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...