alex Certify ಕಾರಿನ ಮೇಲೆ ಅಪರಿಚಿತನ ಸಂದೇಶ ಕಂಡು ಬೆರಗಾದ ಲೇಖಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನ ಮೇಲೆ ಅಪರಿಚಿತನ ಸಂದೇಶ ಕಂಡು ಬೆರಗಾದ ಲೇಖಕಿ

ಒಂದೇ ಒಂದು ಸಣ್ಣದಾದ ಒಳ್ಳೆಯ ನಡವಳಿಕೆಯು ನಿಮ್ಮ ದಿನವನ್ನು ಹಸನಾಗಿಸಬಹುದು. ಈ ಸಂದೇಶವನ್ನು ಸಾರುವ ಪೋಸ್ಟ್‌ ಒಂದು ನೆಟ್‌ನಲ್ಲಿ ವೈರಲ್ ಆಗಿದೆ.

‘Eat Pray Love’ ಲೇಖಕಿ ಎಲಿಝಬೆತ್‌‌ ಗಿಲ್ಬರ್ಟ್ ಹೃದಯಸ್ಪರ್ಶಿ ಫೋಟೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ತಮ್ಮ ಕಾರಿನ ಕಿಟಕಿಯನ್ನು ಕಂದು ಬಣ್ಣದ ಕವರ್ ‌ನಲ್ಲಿ ಮುಚ್ಚಿದ್ದನ್ನು ಕಂಡ ಎಲಿಝಬೆತ್‌, ಅಚ್ಚರಿಯಿಂದ ಅದರ ಬಳಿ ಹೋಗಿ ನೋಡಿದಾಗ, “ನಿಮ್ಮ ಕಿಟಕಿಯನ್ನು ಕೆಳಗೆ ಇಳಿಸಿದ್ದ ಕಾರಣ ಮಳೆಯ ಹನಿಗಳು ಒಳಗೆ ಬೀಳುತ್ತಿದ್ದವು. ನಿಮಗೆ ಸಹಾಯ ಮಾಡಲು ನಾನು ನನ್ನ ಕೈಯಲ್ಲಿ ಆಗಿದ್ದನ್ನು ಮಾಡಿದ್ದೇನೆ” ಎಂದು ಬರೆದಿತ್ತು.

ಯಾವುದೋ ಜ್ಞಾನದಲ್ಲಿ ಕಾರನ್ನು ತಮ್ಮ ಪಾರ್ಕಿಂಗ್ ಲಾಟ್‌ನಲ್ಲಿ ನಿಲ್ಲಿಸಿ, ಕಿಟಕಿ ಮುಚ್ಚಲು ಮರೆತಿದ್ದ ತಮ್ಮ ನೆರವಿಗೆ ಅಪರಿಚಿತರೊಬ್ಬರು ಹೇಗೆ ನಿಂತರು ಎಂದು ಬಹಳ ಖುಷಿಯಿಂದ ಲೇಖಕಿ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...