ಕೊರೊನಾ ವೈರಸ್ ಸಾಂಕ್ರಾಮಿಕವನ್ನ ತಡೆಗಟ್ಟುವ ನಿಟ್ಟಿನಲ್ಲಿ ವಿಶ್ವದ ಹೆಸರಾಂತ ಫಾಸ್ಟ್ಫುಡ್ ತಯಾರಿಕಾ ಕಂಪನಿಗಳು ಹೊಸ ಕ್ರಮಗಳನ್ನ ಕೈಗೊಳ್ಳುತ್ತಿವೆ.
ಸಾಮಾಜಿಕ ಅಂತರ ಕಾಪಾಡುವಂತೆ ಪ್ರೇರೇಪಿಸುವ ಸಲುವಾಗಿ ಕೆಲ ಪ್ರಭಾವಶಾಲಿ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ.
ಫಾಸ್ಟ್ ಫುಡ್ ಕಂಪನಿಗಳ ಪೈಕಿ ಮುಂಚೂಣಿಯಲ್ಲಿರುವ ಚೀನಾ ಸಾಮಾಜಿಕ ಅಂತರವನ್ನ ಕಾಪಾಡುವ ನಿಟ್ಟಿನಲ್ಲಿ ಸ್ವಯಂ ಚಾಲಿತ ಆಹಾರದ ಟ್ರಕ್ ಒಂದನ್ನ ನಿಯೋಜನೆ ಮಾಡಿದೆ. ಸ್ವಯಂ ಚಾಲಿತ ಟ್ರಕ್ಗಳ ಸಹಾಯದಿಂದಾಗಿ ಮಾನವ ಸಂಪರ್ಕ ಕಡಿಮೆಯಾಗಲಿದೆ.
ನಿಯೋಲಿಕ್ಸ್ ಶಾಂಘೈನಲ್ಲಿ ಅಭಿವೃದ್ಧಿಪಡಿಸಲಾದ ಟ್ರಕ್ಗಳ ಸ್ಕ್ರೀನ್ನ್ನ ಬಳಸಿ ತಮ್ಮ ಬೇಕಾದ ಆಹಾರವನ್ನ ಬುಕ್ ಮಾಡಬಹುದಾಗಿದೆ. ಹಾಗೂ ಮೊಬೈಲ್ ಬ್ಯಾಂಕಿಂಗ್ ಮೂಲಕ ಡಿಜಿಟಲ್ ಪಾವತಿ ಮಾಡಬಹುದಾಗಿದೆ. ಪಾವತಿ ಯಶಸ್ವಿಯಾದ ಬಳಿಕ ಆಹಾರ ವಿಭಾಗದಲ್ಲಿರುವ ಫುಡ್ಗಳನ್ನ ಗ್ರಾಹಕರು ಎತ್ತಿಕೊಳ್ಳಲು ಸ್ವಯಂಚಾಲಿತ ವಾಹನ ಅವಕಾಶ ನೀಡುತ್ತದೆ. ಆದರೆ ವಾಹನದಲ್ಲಿರುವ ಆಹಾರಗಳ ಗುಣಮಟ್ಟದ ಬಗ್ಗೆ ಅನೇಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.