alex Certify ಕಾಂಬೋಡಿಯಾಗೆ ಬಂದಿಳಿದ ಪಾಕಿಸ್ತಾನದ ಏಕಾಂಗಿ ಆನೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಂಬೋಡಿಯಾಗೆ ಬಂದಿಳಿದ ಪಾಕಿಸ್ತಾನದ ಏಕಾಂಗಿ ಆನೆ…!

ಪಾಕಿಸ್ತಾನದ ಏಕಾಂಗಿ ಆನೆ ಕಾವನ್​ ಸೋಮವಾರ ಸರಕು ವಿಮಾನದ ಮೂಲಕ ಕಾಂಬೋಡಿಯಾಗೆ ಬಂದಿಳಿದಿದೆ. ಕಾಂಬೋಡಿಯಾದ ಸ್ಥಳೀಯ ಅಭಯಾರಣ್ಯದಲ್ಲಿ ಕವಾನ್​​ ಹೊಸ ಜೀವನ ಆರಂಭಿಸಿದೆ. ಸಹಚಚರಿಲ್ಲದೇ ಮೃಗಾಲಯದಲ್ಲಿ ಏಕಾಂಗಿಯಾಗಿದ್ದ ಕವಾನ್​​ನ ಬಿಡುಗಡೆಗೆ ಆಗ್ರಹಿಸಿದ ಗಾಯಕಿ ಚೆರ್​​ ಅನೇಕ ವರ್ಷಗಳ ಕಾಲ ಕ್ಯಾಂಪೇನ್​ ನಡೆಸಿದ್ದರು.‌

ಕಾಂಬೋಡಿಯಾಗೆ ಆನೆಯನ್ನ ಸ್ವಾಗತಿಸಲು ಸ್ವತಃ ಅಮೆರಿಕದ ಗಾಯಕಿ ಚೆರ್​​ ಸೀಮ್​ ರೀಪ್​ನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ರು. ಕಾವನ್​​ನ ಈ ಸುದೀರ್ಘ ಪ್ರಯಾಣದಲ್ಲಿ ಅದಕ್ಕೆ ಯಾವುದೇ ರೀತಿ ಕಿರಿಕಿರಿಯಾಗೋದನ್ನ ತಪ್ಪಿಸುವ ಸಲುವಾಗಿ ಅದಕ್ಕೆ 200 ಕೆಜಿಗಿಂತಲೂ ಅಧಿಕ ಆಹಾರದ ವ್ಯವಸ್ಥೆ ಮಾಡಲಾಗಿತ್ತು.

36 ವರ್ಷದ ಕಾವನ್​ ಸಹಚರರೇ ಇಲ್ಲದೇ ಇಸ್ಲಾಮಾಬಾದ್​ ಮೃಗಾಲಯದಲ್ಲಿ ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದ. ಇದೀಗ ಆತನಿಗೆ ಬಿಡುಗಡೆ ದೊರಕಿದಂತಾಗಿದೆ ಅಂತಾ ಪ್ರಾಣಿಗಳ ರಕ್ಷಣಾ ಸಂಸ್ಥೆಯಾದ ಫೋರ್​ ಪಾವ್ಸ್ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...