alex Certify ಫಲಿತಾಂಶಕ್ಕೂ ಮುನ್ನವೇ ಒಬಾಮಾ ದಾಖಲೆ ಮುರಿದ ಜೋ ಬಿಡೆನ್​​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫಲಿತಾಂಶಕ್ಕೂ ಮುನ್ನವೇ ಒಬಾಮಾ ದಾಖಲೆ ಮುರಿದ ಜೋ ಬಿಡೆನ್​​..!

ಬರಾಕ್​ ಒಬಾಮಾ ಆಡಳಿತಾವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ಜೋ ಬಿಡೆನ್​ ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಬರಾಕ್​ ಒಬಾಮಾರ ಒಂದು ದಾಖಲೆಯನ್ನ ಚೂರು ಚೂರು ಮಾಡಿದ್ದಾರೆ.

ಅಮೆರಿಕ ಚುನಾವಣೆಯಲ್ಲಿ 70.7 ಮಿಲಿಯನ್​ ಕ್ಕಿಂತ ಹೆಚ್ಚು ಮತಗಳನ್ನ ಬಾಚಿಕೊಳ್ಳುವ ಮೂಲಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಅಭ್ಯರ್ಥಿಗಳಲ್ಲೇ ಅತಿ ಹೆಚ್ಚು ಮತ ಪಡೆದ ವ್ಯಕ್ತಿ ಎನಿಸಿಕೊಂಡಿದ್ದಾರೆ.

2008ರಲ್ಲಿ ಒಬಾಮಾ ಪಡೆದ್ದಕ್ಕಿಂತ 300000 ಹೆಚ್ಚಿನ ಮತಗಳನ್ನ ಜೋ ಬಿಡೆನ್​ ಪಡೆದಿದ್ದಾರೆ.

ಹಾಲಿ ಅಧ್ಯಕ್ಷ ಟ್ರಂಪ್​ ವಿರುದ್ಧ ಸ್ಪರ್ಧಿಸಿರುವ ಜೋ ಬಿಡೆನ್​ ಈಗಾಗಲೇ ಟ್ರಂಪ್​ಗಿಂತ ಹೆಚ್ಚಿನ ಮತಗಳನ್ನ ಪಡೆದು ಮುನ್ನುಗ್ಗುತ್ತಿದ್ದಾರೆ. ಈಗಾಗಲೇ 64ರಷ್ಟು ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಇಲ್ಲಿಯವರೆಗಿನ ಲೆಕ್ಕಾಚಾರದಲ್ಲಿ ಟ್ರಂಪ್​​ಗಿಂತ ಬಿಡೆನ್​ ಮುನ್ನಡೆ ಸಾಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...