ಪ್ರೇಯಸಿ ಸಹೋದರನ ವಿರುದ್ಧ ಭಾರೀ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದ ಅಮೆಜಾನ್ ಸಿಇಓ..! 27-01-2021 5:04PM IST / No Comments / Posted In: Latest News, International ಅಮೆಜಾನ್ ಸಿಇಓ ಜೆಫ್ ಬೆಜೋಸ್ ತನ್ನ ಪ್ರೇಯಸಿಯ ಸಹೋದರನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಮಾತ್ರವಲ್ಲದೇ ಸಮಾಜದಲ್ಲಿ ನನ್ನ ವ್ಯಕ್ತಿತ್ವಕ್ಕೆ ಭಂಗ ತರಲು ಯತ್ನಿಸಿದ ನನ್ನ ಪ್ರೇಯಸಿಯ ಸಹೋದರ ನನಗೆ 1.7 ಮಿಲಿಯನ್ ಡಾಲರ್ ಹಣವನ್ನ ಪರಿಹಾರವಾಗಿ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಕೆಲ ದಿನಗಳ ಹಿಂದೆ ಬೆಜೋಸ್ ಹಾಗೂ ಅವರ ಪ್ರೇಯಸಿ ಲಾರೆನ್ರ ಕೆಲ ವೈಯಕ್ತಿಕ ಫೋಟೋಗಳು ಲೀಕ್ ಆಗಿದ್ದವು. ಇದಾದ ಬಳಿಕ ಬೆಜೋಸ್ ನನ್ನ ಖಾಸಗಿ ಫೋಟೋಗಳನ್ನ ಲಾರೆನ್ ಸಹೋದರನೇ ಲೀಕ್ ಮಾಡಿದ್ದಾನೆ ಎಂದು ಆರೋಪಿಸಿದ್ದರು. ಆದರೆ ಈ ಆರೋಪವನ್ನ ಮೈಕೆಲ್ ಅಲ್ಲಗೆಳೆದಿದ್ದರು. ಅಲ್ಲದೇ ಈ ವಿಚಾರವಾಗಿ ಆರೋಪ ಮಾಡಿದ್ದ ಮೈಕೆಲ್, ಈ ಘಟನೆಯಿಂದ ನನ್ನ ಮರ್ಯಾದೆ ಹಾಳಾಗಿದೆ. ನಮ್ಮ ಮನೆಯ ಮುಂದೆ ಎಫ್ಬಿಐ ವಿಚಾರಣೆ ನಡೆಸಿದೆ. ಇದರಿಂದ ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಗಿದೆ. ಹಾಗೂ ಈ ಪ್ರಕರಣದಲ್ಲಿ ನನ್ನ ವಿರುದ್ಧ ಹೊರಿಸಲಾದ ಎಲ್ಲಾ ಆರೋಪಗಳೂ ಸುಳ್ಳು ಎಂದು ಹೇಳಿದ್ದರು. ಕಲಿಯುಗ ಅಂತ್ಯವಾಯ್ತು ಅಂತಾ ಮಕ್ಕಳನ್ನ ಕೊಂದಿದ್ದ ತಾಯಿ ಶವದ ಮುಂದೆಯೇ ಮಾಡಿದ್ದಳಂತೆ ನೃತ್ಯ…! ಇತ್ತ ಜೆಫ್ ಬೆಜೋಸ್, ಏಂಜಲೀಸ್ ಸುಪೀರಿಯರ್ ಕೋರ್ಟ್ನಲ್ಲಿ ಮೈಕಲ್ ವಿರುದ್ಧ 1.7 ಮಿಲಿಯನ್ ಮೌಲ್ಯದ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಅಲ್ಲದೇ ಈ ವಿಚಾರವಾಗಿ ಮಾತನಾಡಿದ ಅವ್ರು ಮೈಕೆಲ್ ವೈಯಕ್ತಿಕ ಫೋಟೋಗಳನ್ನ ಲೀಕ್ ಮಾಡುವ ಮೂಲಕ ನನಗೆ ಹಾಗೂ ಆತನ ಸಹೋದರಿಗೆ ಮುಖಭಂಗ ಮಾಡಿದ್ದಾರೆ. ಮೈಕೆಲ್ ಈ ಎಲ್ಲಾ ಫೋಟೋಗಳನ್ನ ಮಾಧ್ಯಮಕ್ಕೆ ನೀಡಿದ್ದಾರೆ. ಅಲ್ಲದೇ ನನಗೆ ಮೈಕೆಲ್ ಮಾನಸಿಕವಾಗಿಯೂ ಒತ್ತಡ ಹೇರಿದ್ದಾರೆ ಎಂದು ಹೇಳಿದ್ರು. ಇನ್ನು ಈ ಮಾನನಷ್ಟ ಮೊಕದ್ದಮೆಯ ಸಂಬಂಧ ಪ್ರತಿಕ್ರಿಯಿಸಿರುವ ಮೈಕಲ್ ಪರ ವಕೀಲ ಟಾಮ್ ಬ್ಯಾರೇನ್, ಬೆಜೋಸ್‌ನಶುಲ್ಕ ವಿನಂತಿಯು ಅನೇಕ ಹಂತಗಳಲ್ಲಿ ತೊಂದರೆ ನೀಡುತ್ತಿದೆ ಎಂದು ಹೇಳಿದ್ದಾರೆ.