alex Certify 50ರ ಆಸುಪಾಸಿನಲ್ಲಿಯೂ ಈ ಕಾರಣಕ್ಕೆ ಯುವತಿಯಂತೆ ಕಾಣಿಸಿಕೊಂಡ ವ್ಯಕ್ತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

50ರ ಆಸುಪಾಸಿನಲ್ಲಿಯೂ ಈ ಕಾರಣಕ್ಕೆ ಯುವತಿಯಂತೆ ಕಾಣಿಸಿಕೊಂಡ ವ್ಯಕ್ತಿ..!

ಸೋಶಿಯಲ್​ ಮೀಡಿಯಾದ ಈ ಜಮಾನದಲ್ಲಿ ಕಣ್ಣಿಗೆ ಕಂಡಿದ್ದನ್ನೆಲ್ಲ ನಿಜ ಎಂದು ನಂಬುವ ಹಾಗಿಲ್ಲ. ಫೋಟೋದಲ್ಲಿರುವ ವ್ಯಕ್ತಿಯೂ ನಿಜವಾಗಿಯೂ ಆತನ ರೂಪಕ್ಕೂ ಅಜಗಜಾಂತರ ವ್ಯತ್ಯಾಸವೇ ಇರಬಹುದು. ಅದರಲ್ಲೂ ಫೇಸ್​ ಆಪ್​​ಗಳಂತಹ ಅಪ್ಲಿಕೇಶನ್​ಗಳ ಸಹಾಯದಿಂದ ನಿಮ್ಮ ರೂಪವನ್ನ, ವಯಸ್ಸನ್ನ ಅಷ್ಟೇ ಯಾಕೆ ಲಿಂಗವನ್ನೇ ಫೋಟೋ ಮೂಲಕ ಬದಲಾಯಿಸಬಹುದು.

ಈ ಮಾತಿಗೆ ಉತ್ತಮ ಉದಾಹರಣೆ ಎಂಬಂತೆ 50 ವರ್ಷದ ವ್ಯಕ್ತಿಯೊಬ್ಬ ಹುಡುಗಿಯ ರೂಪದಲ್ಲಿ ತನ್ನ ಫೋಟೋಗಳನ್ನ ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಜಪಾನ್​ನ ಈ ವ್ಯಕ್ತಿ ಟ್ವಿಟರ್​​ ಹಾಗೂ ಇನ್​ಸ್ಟಾಗ್ರಾಂಗಳಲ್ಲಿ ಫೇಸ್​ ಆಪ್​ನ ಸಹಾಯದಿಂದ ಯುವತಿಯ ರೀತಿಯಲ್ಲಿ ತಮ್ಮ ಮುಖಚರ್ಯೆ ಬದಲಾಯಿಸಿದ ಫೋಟೋಗಳನ್ನ ಶೇರ್​ ಮಾಡಿದ್ದಾರೆ.

ಕನ್ನಡಿ ಮುಂದೆ ನಿಂತು ತೆಗೆದ ಹಲವಾರು ಫೋಟೋಗಳಲ್ಲಿ ಈ ವ್ಯಕ್ತಿಯ ನಿಜ ರೂಪ ಬಯಲಾಗಿದೆ. ಇನ್ನು ಈ ವಿಚಾರವಾಗಿ ಮಾತನಾಡಿದ ಈತ, ನನಗೆ ಫೇಸ್​ ಆಪ್​ನ ಗೀಳು ಹತ್ತಿದೆ. ಈ ಅಪ್ಲಿಕೇಶನ್​​​ ಸಹಾಯದಿಂದ ನಾನು ನನ್ನ ಮುಖವನ್ನ ಬದಲಾಯಿಸಿಕೊಳ್ಳಬಹುದು. ನಾನು 50 ವರ್ಷದ ಅಂಕಲ್​. ನಾನು ಹೆಚ್ಚಾಗಿ ವರ್ಕ್​ ಫ್ರಮ್​ ಹೋಮ್​ನಲ್ಲಿರುತ್ತೇನೆ ಎಂದು ಇನ್​ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...