alex Certify ಫಸಲಿನ ರಕ್ಷಣೆಗೆ ಬಂತು ರೊಬೋಟ್​ ತೋಳ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫಸಲಿನ ರಕ್ಷಣೆಗೆ ಬಂತು ರೊಬೋಟ್​ ತೋಳ..!

ಗುಂಡಮ್​​, ಸೂಪರ್​ ಮಾರಿಯೋ, ಪೋಕ್ಮನ್​ ಸೇರಿದಂತೆ ಅತ್ಯಾಕರ್ಷಕ ರೋಬೋಟ್​, ಆನಿಮೇಷನ್​ ಸ್ಕಿಲ್​ನಲ್ಲಿ ಜಪಾನ್​ ಬಿಟ್ಟರೆ ಮತ್ತೊಂದು ರಾಷ್ಟ್ರವಿಲ್ಲ. ಇದೀಗ ಇನ್ನೂ ಒಂದು ಹಂತ ಮುಂದೆ ಹೋಗಿರೋ ಜಪಾನ್​, ಜಮೀನಿನಲ್ಲಿ ಫಸಲನ್ನ ರಕ್ಷಿಸೋಕೆ ರೊಬೋಟ್​ ತಂತ್ರಜ್ಞಾನ ಬಳಸುತ್ತಿದೆ.

ನ್ಯೂಯಾರ್ಕ್​ ಪೋಸ್ಟ್ ಇತ್ತೀಚೆಗೆ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದು ಇದರಲ್ಲಿ ಜಮೀನಿನ ರಕ್ಷಣೆಗೆಂದು ತೋಳದ ಮಾದರಿಯ ರೊಬೋಟ್​ನ್ನ ಇರಿಸಲಾಗಿದೆ. ಕೆಂಪು ಬಣ್ಣದ ಕಣ್ಣಿನ ಈ ರೋಬೋಟ್​ ತೋಳ, ಕಾಡು ಪ್ರಾಣಿಗಳಿಂದ ಜಮೀನನ್ನ ರಕ್ಷಣೆ ಮಾಡುತ್ತದೆಯಂತೆ.

ಓಹ್ತಾ ಸೀಕಿ ಎಂಬವರು ಈ ರೋಬೋಟ್​ನ್ನ ವಿನ್ಯಾಸಗೊಳಿಸಿದ್ದು, ಸಂವೇದಕಗಳ ಸಹಾಯದಿಂದ ಇದು ತಲೆ ಅಲ್ಲಾಡಿಸೋದು ಹಾಗೂ ಪ್ರಾಣಿಗಳನ್ನ ಕಂಡೊಡನೆಯೇ ಕೂಗುವ ಕೆಲಸವನ್ನ ಮಾಡುತ್ತೆ. ಇದರ ಕೋರೆ ಹಲ್ಲುಗಳು ಕರಡಿಯನ್ನೂ ಹೆದರಿಸಿ ಜಮೀನಿನಿಂದ ಓಡಿಸಿದೆ.

ಹೊಕ್ಕೈಡೋ ಹಾಗೂ ಒಕಿನಾವಾ ಪ್ರದೇಶಗಳಲ್ಲಿರುವ ಜಮೀನುಗಳಲ್ಲಿ ಈ ರೊಬೋಟ್​ ತೋಳಗಳನ್ನ ನಿಲ್ಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...