alex Certify ಟ್ವಿಟರ್​ ಪೋಸ್ಟ್ ಮೂಲಕ ನೆಟ್ಟಿಗರ ತಲೆಗೆ ಹುಳ ಬಿಟ್ಟ ಇವಾಂಕಾ ಟ್ರಂಪ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವಿಟರ್​ ಪೋಸ್ಟ್ ಮೂಲಕ ನೆಟ್ಟಿಗರ ತಲೆಗೆ ಹುಳ ಬಿಟ್ಟ ಇವಾಂಕಾ ಟ್ರಂಪ್​..!

ಅಮೆರಿಕ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಪುತ್ರಿ ಇವಾಂಕಾ ಟ್ರಂಪ್​ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿ ಇರ್ತಾರೆ. ಈ ಬಾರಿ ಕೂಡ ಅವರು ತಮ್ಮ ತಂದೆ ಡೊನಾಲ್ಡ್ ಟ್ರಂಪ್​ ಜೊತೆ ಸೆಲ್ಫಿಯೊಂದನ್ನ ತೆಗೆದುಕೊಂಡಿದ್ದು ಅದನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ‌

ಇದರಲ್ಲಿ ವಿಶೇಷ ಏನಿದೆ ಎಂಬ ಪ್ರಶ್ನೆ ಮೂಡೋದು ಸಹಜ. ಆದರೆ ಈ ಫೋಟೋ ಜೊತೆ ಆಕೆ ಟ್ಯಾಗ್​ ಮಾಡಿರೋ ಕೆಲ ಖಾತೆಗಳು ಟ್ವೀಟಿಗರನ್ನ ಗೊಂದಲಕ್ಕೀಡು ಮಾಡಿದೆ.

ಸೋಮವಾರ ತಂದೆ ಜೊತೆ ಜಾರ್ಜಿಯಾಗೆ ಪ್ರಯಾಣ ಬೆಳೆಸಿದ್ದ ಇವಾಂಕಾ ಏರ್​ ಫೋರ್ಸ್​ನಲ್ಲಿದ್ದಾಗ ತಮ್ಮ ತಂದೆಯೊಂದಿಗೆ ತೆಗೆದ ಸೆಲ್ಫಿಯನ್ನ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಹೊರಬಂದು ಜಾರ್ಜಿಯಾಗೆ ಮತ ನೀಡಿ ಎಂದು ಶೀರ್ಷಿಕೆಯನ್ನೂ ಕೊಟ್ಟಿದ್ದಾರೆ.

ಈ ಫೋಟೋಗೆ ಇವಾಂಕಾ ರಿಪಬ್ಲಿಕನ್​ ಪಾರ್ಟಿ, ಜಾರ್ಜಿಯಾ ಸೆನೆಟರ್​ಗಳಾದ ಡೇವಿಡ್​ ಪರ್ಡ್ಯೂ ಹಾಗೂ ಕೆಲ್ಲಿ ಲೋಫ್​ ಮತ್ತು ಶ್ವೇತಭವನ ಸಹಾಯಕ ಡಾನ್​ ಸ್ಕ್ಯಾವಿನೋ ಜ್ಯೂನಿಯರ್​ನ್ನು ಟ್ಯಾಗ್​ ಮಾಡಿದ್ದಾರೆ. ತನ್ನ ತಂದೆಯನ್ನ ಟ್ಯಾಗ್​ ಮಾಡದ ಇವಾಂಕಾ ಗಾಯಕ ಹಾಗೂ ನಟ ಲೋಫ್​ರನ್ನ ಈ ಫೋಟೋಗೆ ಟ್ಯಾಗ್​ ಮಾಡೋದ್ರ ಮೂಲಕ ನೆಟ್ಟಿಗರ ತಲೆಗೆ ಹುಳ ಬಿಟ್ಟಿದ್ದಾರೆ. ಈ ತಪ್ಪನ್ನ ಗಮನಿಸಿದ ನೆಟ್ಟಿಗರು ಈ ಫೋಟೋವನ್ನ ವೈರಲ್​ ಮಾಡೋದ್ರ ಜೊತೆಗೆ ಮೀಟ್​ ಲೋಫ್​​ರನ್ನೂ ಟ್ರೆಂಡಿಂಗ್​ನಲ್ಲಿರಿಸಿದ್ದಾರೆ.

— Ivanka Trump (@IvankaTrump) January 4, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...