alex Certify ಬೀದಿಯಲ್ಲಿ ಕಂಡ‌ ಬೃಹತ್ ಹಂದಿಯನ್ನು ನೋಡಿ ದಂಗಾದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೀದಿಯಲ್ಲಿ ಕಂಡ‌ ಬೃಹತ್ ಹಂದಿಯನ್ನು ನೋಡಿ ದಂಗಾದ ಮಹಿಳೆ

ಮೆಲ್ಬೋರ್ನ್: ದೊಡ್ಡ ಹಂದಿಯೊಂದು ತನ್ನ ಬಂಧನ ಬಿಡಿಸಿಕೊಂಡು ಬಂದು ಬೀದಿಯಲ್ಲಿ ಓಡಾಟ ನಡೆಸಿದ ಘಟನೆ ನಡೆದಿದೆ.‌ ಆಸ್ಟ್ರೇಲಿಯಾದ ಉತ್ತರ ಅಡಿಲೆಡ್ ಸೆಲ್ಸ್ ಬರಿ ಎಂಬ ಪಟ್ಟಣದಲ್ಲಿ ಈ ಘಟನೆ ನಡೆದಿದೆ.‌

ಹಂದಿ ಬಂದರೆ ಆತಂಕವೇಕೆ..? ನಮ್ಮ ಪಟ್ಟಣಗಳಲ್ಲಿ ಕಾಲು ಬುಡದಲ್ಲೇ ಹಂದಿಗಳು ಓಡಾಡುತ್ತಿರುತ್ತವಲ್ಲ ಎಂದು ನೀವು ಹೇಳಬಹುದು. ಆದರೆ, ಇದು ಅಂತಿಂತ ಹಂದಿಯಲ್ಲ.

ಜಸ್ಸಿಕಾ ಎಂಬ ಮಹಿಳೆ ತಾವು ಕಾರಿನಲ್ಲಿ ಪ್ರಯಾಣ ಮಾಡುವಾಗ ಹಂದಿಯನ್ನು ನೋಡಿದ್ದು, ಅದರ ವಿಡಿಯೋ ಮಾಡಿ ಇನ್ಸ್ಟಾಗ್ರಾಂ‌ನಲ್ಲಿ ಹಂಚಿಕೊಂಡಿದ್ದಾರೆ.

“ಓ‌ ಮೈ ಗಾಡ್” ಎಂದು‌ ಉದ್ಗಾರ ತೆಗೆಯುವಷ್ಟು ದೊಡ್ಡದಿದೆ ಹಂದಿ. ದೊಡ್ಡ ಘೆಂಡಾಮೃಗ ನೋಡಿದಂತೆ ಕಾಣುತ್ತದೆ. ಸಾಮಾನ್ಯವಾಗಿ ದಪ್ಪಗಿದ್ದವರನ್ನು ಹಂದಿ ಬೆಳೆದಂತೆ ಬೆಳೆದಿದ್ದೀಯಾ ಎನ್ನುವುದಿದೆ. ಇದನ್ನು ನೋಡಿಯೇ ಹಾಗೆ ಹೇಳುತ್ತಿರಬಹುದೇ ಎನ್ನುವಷ್ಟು ಹಂದಿ ಬೆಳೆದಿದೆ.‌ ಅದರ‌ ಹೆಸರು ಜೊನಿ ಎಂದಂತೆ.‌ ಕೆಲ ಸಮಯದ ಬಳಿಕ ಹಂದಿಯನ್ನು ಮತ್ತೆ ಕೂಡಿ‌ ಹಾಕಲಾಯಿತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...