alex Certify ಇನ್ಸ್ಟ್ರಾಗ್ರಾಮ್ ನಲ್ಲಿ ಫೋಟೋ ಹಾಕಿ ಜೈಲು ಸೇರಿದ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ಸ್ಟ್ರಾಗ್ರಾಮ್ ನಲ್ಲಿ ಫೋಟೋ ಹಾಕಿ ಜೈಲು ಸೇರಿದ ದಂಪತಿ

ಇರಾನಿನ ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿಯಾಗಿದ್ದ ಅಹ್ಮದ್ ಮೊಯಿನ್ ಶಿರಾಜಿ ಮತ್ತು ಪತ್ನಿ ಶಬ್ನಮ್ ಶಾ ರೋಖಿಗೆ ನ್ಯಾಯಾಲಯವು 16 ವರ್ಷಗಳ ಜೈಲು ಶಿಕ್ಷೆ ಮತ್ತು 74 ಛಡಿ ಏಟುಗಳ ಶಿಕ್ಷೆ ವಿಧಿಸಿದೆ. ಈ ದಂಪತಿ 2019 ರಲ್ಲಿಯೇ ಇರಾನ್‌ನಿಂದ ಟರ್ಕಿಗೆ ತೆರಳಿದ್ದರು. ಇವರಿಬ್ಬರ ಅನುಪಸ್ಥಿತಿಯಲ್ಲಿ ಈ ಶಿಕ್ಷೆ ವಿಧಿಸಲಾಗಿದೆ.

ಶಿರಾಜಿ ಹಾಗೂ ಆತನ ಪತ್ನಿ ಸಾಮಾಜಿಕ ಜಾಲತಾಣ ಇನ್ಸ್ಟ್ರಾಗ್ರಾಮ್ ನಲ್ಲಿ ಸರ್ಕಾರದ ವಿರುದ್ಧ ಪ್ರಚಾರ ಮಾಡಿದ್ದರಂತೆ. ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪೋಸ್ಟ್ ಹಾಗೂ ನೈತಿಕ ಭ್ರಷ್ಟಾಚಾರದ ಆರೋಪ ಹೊರಿಸಲಾಗಿದೆ.ಶಿರಾಜಿ ತನ್ನಿಬ್ಬರು ಮಕ್ಕಳ ಜೊತೆ ಟರ್ಕಿಗೆ ಹೋಗಿದ್ದಾನೆ.

ಇರಾನ್ ನಲ್ಲಿ ತಮ್ಮನ್ನು ಅಪರಾಧಿಯೆಂದು ಸಾಬೀತುಪಡಿಸುವ ಪ್ರಯತ್ನ ನಡೆಯುತ್ತಿದೆ. ಹಾಗಾಗಿ ಟರ್ಕಿಗೆ ಹೋಗ್ತಿದ್ದೇವೆಂದು ಪೋಸ್ಟ್ ಮಾಡಿದ್ದ. ಶಿರಾಜಿಗೆ ಇನ್ಸ್ಟ್ರಾಗ್ರಾಮ್ ನಲ್ಲಿ ಮಿಲಿಯನ್ ಗಿಂತಲೂ ಹೆಚ್ಚು ಫಾಲೋವರ್ಸ್ ಇದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...