alex Certify OMG: 6 ತಿಂಗಳ ಕಾಲ ನೀರ‌ಲ್ಲಿದ್ದರೂ ಸುಸ್ಥಿತಿಯಲ್ಲಿದೆ ಈ ಫೋನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG: 6 ತಿಂಗಳ ಕಾಲ ನೀರ‌ಲ್ಲಿದ್ದರೂ ಸುಸ್ಥಿತಿಯಲ್ಲಿದೆ ಈ ಫೋನ್

ಮೊಬೈಲ್​ ಫೋನ್​ ನೀರಿನಲ್ಲಿ ಬಿತ್ತು ಅಂದರೆ ಕತೆ ಮುಗೀತು ಅಂತಾನೇ ಅರ್ಥ. ನಿಮ್ಮ ಅದೃಷ್ಟ ಚೆನ್ನಾಗಿತ್ತು ಅಂದರೆ ರಿಪೇರಿ ಬಳಿಕ ಮೊಬೈಲ್​ ಸರಿ ಆಗಲೂಬಹುದು. ಆದರೆ ಆರು ತಿಂಗಳುಗಳ ಕಾಲ ನದಿಯಲ್ಲಿ ಇರುವ ಮೊಬೈಲ್​ ಒಂದು ಸಹಜ ಸ್ಥಿತಿಯಲ್ಲೇ ನಿಮ್ಮ ಕೈ ಸೇರುತ್ತೆ ಅಂದರೆ ನಿಮಗೆ ನಂಬೋಕೆ ಸಾಧ್ಯವಾ..?

ಐಫೋನ್​ ಕೊಂಡುಕೊಳ್ಳೋದು ಅಂದರೆ ಎಲ್ಲರಿಂದಲೂ ಸಾಧ್ಯವಾಗುವ ಕೆಲಸವಲ್ಲ. ಹೀಗಾಗಿ ಇಂತಹ ಐಷಾರಾಮಿ ಮೊಬೈಲ್​ ಫೋನ್​ಗಳು ನೆಲಕ್ಕೆ ಉರುಳಿದ್ವು ಅಂದ್ರೆನೆ ಹೃದಯ ನಿತ್ತಂತೆ ಆಗುತ್ತೆ. ಅಂತದ್ರಲ್ಲಿ ವ್ಯಕ್ತಿಯೊಬ್ಬ ತನ್ನ ಐ ಫೋನ್​ನ್ನು ನದಿಯಲ್ಲಿ ಕಳೆದುಕೊಂಡಿದ್ದರು.

ರಾಜ್ಯದಲ್ಲಿ ಹೆಚ್ಚಿದ ಕೊರೋನಾ ತಡೆಗೆ ಕಠಿಣ ನಿಯಮ, ಲಾಕ್ಡೌನ್ ಜಾರಿ ಬಗ್ಗೆ ಇಂದು ನಿರ್ಧಾರ

ಆದರೆ ಆಶ್ಚರ್ಯಕರ ವಿಚಾರ ಅಂದರೆ ಈ ಮೊಬೈಲ್​ ಬರೋಬ್ಬರಿ 6 ತಿಂಗಳ ಬಳಿಕ ಈಜುಗಾರರೊಬ್ಬರ ಕೈ ಸೇರಿದೆ. ಇದಕ್ಕೂ ಅಚ್ಚರಿಯ ವಿಚಾರ ಅಂದರೆ 6 ತಿಂಗಳುಗಳ ಕಾಲ ನೀರಿನಲ್ಲಿ ಇದ್ದರೂ ಸಹ ಈ ಫೋನ್​ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಕ್ಲೇಯ್ಟನ್​ ಹೆಲ್ಕೆನ್​ಬರ್ಗ್​ ಎಂಬವರು ಹ್ಯಾರಿಸನ್​ ಹಾಟ್​ ಸ್ಪ್ರಿಂಗ್​ನ ಕೆರೆಯಲ್ಲಿ ಈ ಮೊಬೈಲ್​ನ್ನು ಪತ್ತೆ ಮಾಡಿದ್ದಾರೆ. ಹಾಗೂ ಈ ಮೊಬೈಲ್​ನ್ನು ಮಾಲೀಕನಿಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ .ಈ ಐಫೋನ್​ 11ನ್ನು ಮಾಲೀಕ ಕಳೆದ ವರ್ಷದ ಸೆಪ್ಟೆಂಬರ್​​ನಲ್ಲಿ ದೋಣಿಯಲ್ಲಿ ವಿಹಾರ ಮಾಡುತ್ತಿದ್ದ ವೇಳೆ ಕಳೆದುಕೊಂಡಿದ್ದರಂತೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...