ಮನೆ ಅಂತಾ ಅಂದಕೂಡಲೇ ಅದರಲ್ಲಿ ಅಡುಗೆ ಮನೆ, ಶೌಚಾಲಯ, ಸ್ನಾನಗೃಹ ಹೀಗೆ ಇವೆಲ್ಲವೂ ಕಣ್ಮುಂದೆ ಬರುತ್ತೆ. ಅದರಲ್ಲೂ ನೀವು ತಿಂಗಳಿಗೆ 1,20,292.43 ರೂಪಾಯಿ ಬಾಡಿಗೆ ನೀಡುತ್ತೀರಾ ಅಂದಮೇಲೆ ಆ ಅಪಾರ್ಟ್ಮೆಂಟ್ನಲ್ಲಿರುವ ಮನೆಯ ಸೌಕರ್ಯ ಇನ್ನೆಷ್ಟು ಚೆನ್ನಾಗಿ ಇರಬೇಡ ಹೇಳಿ..? ಆದರೆ ನ್ಯೂಯಾರ್ಕ್ ಐಷಾರಾಮಿ ಮನೆಯೊಂದರಲ್ಲಿ ಅಡುಗೆ ಮನೆಯಾಗಲಿ, ಸ್ನಾನ ಗೃಹವಾಗಲಿ ಇಲ್ಲವೇ ಇಲ್ಲ..!
ಟಿಕ್ಟಾಕ್ನಲ್ಲಿ ಇಂತಹ ಒಂದು ವಿಚಿತ್ರ ಅಪಾರ್ಟ್ಮೆಂಟ್ ಮನೆಯ ವಿಡಿಯೋವೊಂದು ವೈರಲ್ ಆಗಿದ್ದು ಮಿಲಿಯನ್ಗಟ್ಟಲೇ ವೀವ್ಸ್ ಪಡೆದುಕೊಂಡಿದೆ. ಮನೆಯ ವಿಡಿಯೋ ಪೋಸ್ಟ್ ಮಾಡಿರುವ ಬಳಕೆದಾರರು ಅತ್ಯಂತ ಕೆಟ್ಟ ಅಪಾರ್ಟ್ಮೆಂಟ್ ಅಂತಾ ಶೀರ್ಷಿಕೆ ನೀಡಿದ್ದಾರೆ.
ಪ್ರೀತಿ ನಿರಾಕರಿಸಿದಾಕೆಯ ಮೇಲಿನ ಸಿಟ್ಟಿಗೆ ಪ್ರಿಯತಮ ಮಾಡ್ದ ಇಂಥಾ ಕೆಲಸ
ವಿಡಿಯೋದಲ್ಲಿ ತೋರಿಸಲಾದ ಮನೆಯಲ್ಲಿ ಒಂದು ಕೋಣೆಯಿದೆ. ಅದರಲ್ಲಿ ಸ್ನಾನಗೃಹವಾಗಲಿ, ಶೌಚಾಲಯವಾಗಲಿ, ಒಲೆ, ಫ್ರಿಡ್ಜ್ ಹೀಗೆ ಯಾವುದೇ ಗೃಹೋಪಯೋಗಿ ಸಲಕರಣೆಗಳು ಕಂಡು ಬರೋದಿಲ್ಲ. ಅಂದಹಾಗೆ ಈ ಮನೆಯ ಬಾಡಿಗೆ ತಿಂಗಳಿಗೆ ಬರೋಬ್ಬರಿ 1,20,292.43 ರೂಪಾಯಿಗಳೆಂದು ಟಿಕ್ ಟಾಕ್ ಬಳಕೆದಾರ ಹೇಳಿಕೊಂಡಿದ್ದಾರೆ.
https://youtu.be/fqqiV2cjAy8?t=45