alex Certify ಅಮೆರಿಕದಲ್ಲಿ ಭಾರತೀಯ ಮೂಲದ ದಂಪತಿ ನಿಗೂಢ ಸಾವು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕದಲ್ಲಿ ಭಾರತೀಯ ಮೂಲದ ದಂಪತಿ ನಿಗೂಢ ಸಾವು..!

ಅಮೆರಿಕದಲ್ಲಿ ನೆಲೆಸಿದ್ದ ಭಾರತೀಯ ಮೂಲದ ದಂಪತಿ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮನೆಯ ಬಾಲ್ಕನಿಯಲ್ಲಿ ನಾಲ್ಕು ವರ್ಷದ ಮಗು ಅಳುತ್ತಿರೋದನ್ನ ಕಂಡ ನೆರೆಮನೆಯವರು ಮನೆಗೆ ತೆರಳಿದ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.

ಚಾಕು ಇರಿತದಿಂದ ಈ ದಂಪತಿ ಮೃತರಾಗಿದ್ದಾರೆ ಎಂದು ಅಮೆರಿಕದ ಕೆಲ ಮಾಧ್ಯಮಗಳು ವರದಿ ಮಾಡಿವೆ. ಬಾಲಾಜಿ ಭರತ್​ ರುದ್ರಾವರ್​ (32) ಹಾಗೂ ಆತನ ಪತ್ನಿ ಆರತಿ ಬಾಲಾಜಿ ರುದ್ರಾವರ್​ (30) ಮೃತದೇಹ ನ್ಯೂಜೆರ್ಸಿಯ 21 ಗಾರ್ಡನ್​ ಟೆರ್ರೆಸ್​ ಅಪಾರ್ಟ್​ಮೆಂಟ್​​ನಲ್ಲಿ ಪತ್ತೆಯಾಗಿದೆ.

ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಾಲಾಜಿ ತಂದೆ ಭರತ್​ ರುದ್ರಾವರ್​, ನಮ್ಮ ಮೊಮ್ಮಗಳು ಬಾಲ್ಕನಿಯಲ್ಲಿ ಅಳುತ್ತಿರೋದನ್ನ ಕಂಡ ನೆರೆಹೊರೆಯವರು ಸ್ಥಳೀಯ ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಮನೆಯ ಒಳಗೆ ಹೋದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.

ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು ವರದಿಗಾಗಿ ತನಿಖಾಧಿಕಾರಿಗಳು ಕಾಯುತ್ತಿದ್ದಾರೆ. ಇನ್ನು ಈ ಸಂಬಂಧ ಸ್ಥಳೀಯ ಪೊಲೀಸರು ಮಾತನಾಡಿದ್ದು, ದಂಪತಿ ಸಾವಿಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ರು.

ನನ್ನ ಸೊಸೆ 7 ತಿಂಗಳ ಗರ್ಭವತಿಯಾಗಿದ್ದಳು. ನಾವು ಕೆಲವೇ ದಿನಗಳಲ್ಲಿ ಅಮೆರಿಕಕ್ಕೆ ಪ್ರಯಾಣ ಬೆಳೆಸುವವರಿದ್ದೆವು. ಅವರದ್ದು ಸುಖಿ ಕುಟುಂಬ. ಅವರ ಮೃತ ದೇಹ ಭಾರತ ತಲುಪಲು 8-10 ದಿನವಾಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ನಮ್ಮ ಮೊಮ್ಮಗಳು ನನ್ನ ಪುತ್ರನ ಸ್ನೇಹಿತರ ಮನೆಯಲ್ಲಿ ಇದ್ದಾಳೆ. ನ್ಯೂಜೆರ್ಸಿಯಲ್ಲಿ 60 ಪ್ರತಿಶತ ಭಾರತೀಯರೇ ಇದ್ದಾರೆ ಎಂದು ಭರತ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...