alex Certify ಭಾಷಣದ ವೇಳೆ ತಡಕಾಡಿ ಟ್ರೋಲಿಗರ ಬಾಯಿಗೆ ಆಹಾರವಾದ ಪಾಕ್​ ಪ್ರಧಾನಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾಷಣದ ವೇಳೆ ತಡಕಾಡಿ ಟ್ರೋಲಿಗರ ಬಾಯಿಗೆ ಆಹಾರವಾದ ಪಾಕ್​ ಪ್ರಧಾನಿ…!

ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ಒಳ್ಳೆಯ ಕಾರ್ಯಕ್ಕಿಂತ ಜಾಸ್ತಿ ಯಡವಟ್ಟುಗಳ ಮೂಲಕವೇ ಸುದ್ದಿ ಮಾಡ್ತಿರ್ತಾರೆ. ಹೀಗಾಗಿ ಸೋಶಿಯಲ್​ ಮೀಡಿಯಾದಲ್ಲಿ ಪಾಕಿಸ್ತಾನ ಪ್ರಧಾನಿ ವಿರುದ್ಧ ದಿನಕ್ಕೊಂದು ಟ್ರೋಲ್​ ಹರಿದಾಡ್ತಾನೇ ಇರುತ್ತೆ. ಇದೀಗ ಮತ್ತೊಂದು ಯಡವಟ್ಟಿನ ಮೂಲಕ ಇಮ್ರಾನ್ ಖಾನ್​ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ.

ಇತ್ತೀಚೆಗೆ ಪಾಕಿಸ್ತಾನ ಪತ್ರಕರ್ತೆ ನಾಯ್ಲಾ ಇನಾಯತ್​ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನ ಶೇರ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಇಮ್ರಾನ್​ ಖಾನ್​ ದೇಶದ ನಿವಾಸಿಗಳನ್ನ ಉದ್ದೇಶಿಸಿ ಮಾತನಾಡುತ್ತಿದ್ದಾರೆ.

ಇದರ ಜೊತೆಯಲ್ಲಿ ಇಮ್ರಾನ್​ ವಿಪಕ್ಷದವರಿಗೂ ಟಾಂಗ್​ ನೀಡುತ್ತಿದ್ದರು. ಭಾಷಣ ಮಾಡುತ್ತಾ ಮಾಡುತ್ತಾ ಇಮ್ರಾನ್​ ಖಾನ್​ ಮುಂದಿನ ಸಾಲುಗಳನ್ನೇ ಮರೆತಿದ್ದಾರೆ. ‘ಇದು ಎಲ್ಲಾ……ದೊಡ್ಡ-ದೊಡ್ಡ, ದೊಡ್ಡ-ದೊಡ್ಡ, ಏನಿದೆ ಇದು..? ಏನಾದ್ರೂ ಇರಲಿ’ ಎಂದು ಅರ್ಥವಿಲ್ಲದ ಮಾತುಗಳನ್ನ ಆಡಿದ್ದಾರೆ.

ಟಿವಿಗಳಲ್ಲಿ ಈ ಭಾಷಣ ಲೈವ್​ ಟೆಲಿಕಾಸ್ಟ್​ ಆಗುತ್ತಿತ್ತು. 17 ಸೆಕೆಂಡ್​ನ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...