alex Certify ಎಚ್ಚರ..! ಇದು ಕೊರೊನಾದ ಹೊಸ ಲಕ್ಷಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಚ್ಚರ..! ಇದು ಕೊರೊನಾದ ಹೊಸ ಲಕ್ಷಣ

ಕೊರೊನಾ ವೈರಸ್ ಸೋಂಕು ತಡೆಯಲು ವಿಶ್ವದಾದ್ಯಂತ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆಯುತ್ತಿದೆ. ಆದ್ರೆ ಸೋಂಕಿನ ಲಕ್ಷಣಗಳು ಬದಲಾಗ್ತಿರುವುದು ಸಂಶೋಧಕರಿಗೆ ಸಮಸ್ಯೆಯಾಗಿದೆ.

ಈ ಹಿಂದೆಯಿದ್ದ ಕೊರೊನಾ ಲಕ್ಷಣಗಳು ಈಗ ಬದಲಾಗಿವೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಅಥವಾ ಸಿ.ಡಿ.ಸಿ., ಕೊರೊನಾದ ಹೊಸ ರೋಗ ಲಕ್ಷಣಗಳ ಬಗ್ಗೆ ಮಾಹಿತಿಯನ್ನು ನೀಡಿದೆ.

ಸಿ.ಡಿ.ಸಿ. ತನ್ನ ವೆಬ್‌ಸೈಟ್ ಮೂಲಕ ಕೊರೊನಾದ ಹೊಸ ರೋಗ ಲಕ್ಷಣಗಳ ಬಗ್ಗೆ ಜಗತ್ತಿಗೆ ತಿಳಿಸಿದೆ. ಇದು ಕೊರೊನಾದ ಸೌಮ್ಯ ರೋಗ ಲಕ್ಷಣಗಳಿಂದ ಹಿಡಿದು ಗಂಭೀರ ಅನಾರೋಗ್ಯದವರೆಗೆ ಎಲ್ಲವನ್ನೂ ಒಳಗೊಂಡಿದೆ. ಈ ಎಲ್ಲಾ ಲಕ್ಷಣಗಳು ವೈರಸ್‌ಗೆ ಒಡ್ಡಿಕೊಂಡ 2 ರಿಂದ 14 ದಿನಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಸಿ.ಡಿ.ಸಿ. ಪ್ರಕಾರ, ಹೊಸ ಲಕ್ಷಣಗಳು ಶೀತ, ಸ್ನಾಯು ನೋವು, ತಲೆನೋವು ಮತ್ತು ರುಚಿ ಅಥವಾ ವಾಸನೆಯ ಗೊತ್ತಾಗದಿರುವುದನ್ನು ಒಳಗೊಂಡಿದೆ.

ಈ ಹಿಂದೆ ಜ್ವರ, ಕೆಮ್ಮು, ಉಸಿರಾಟ ತೊಂದರೆಯನ್ನು ಮಾತ್ರ ಕೊರೊನಾ ಸೋಂಕಿನ ಲಕ್ಷಣವೆನ್ನಲಾಗಿತ್ತು. ಶೇಕಡಾ 80ರಷ್ಟು ಮಂದಿಗೆ ಕೊರೊನಾ ಲಕ್ಷಣಗಳೇ ಕಾಣಿಸುವುದಿಲ್ಲವಂತೆ. ಬಹಳ ಸೌಮ್ಯ ಲಕ್ಷಣವನ್ನುಅವರು ಹೊಂದಿರುತ್ತಾರೆಂದು ಡಬ್ಲ್ಯೂಎಚ್ಒ ಹೇಳಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...