alex Certify ದಂಗಾಗಿಸುತ್ತೆ ಅವಳಿ ಸಹೋದರಿಯರು ಪಡೆದಿರುವ ವಿದ್ಯಾರ್ಥಿ ವೇತನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುತ್ತೆ ಅವಳಿ ಸಹೋದರಿಯರು ಪಡೆದಿರುವ ವಿದ್ಯಾರ್ಥಿ ವೇತನ

ಒಳ್ಳೆಯ ಮೊತ್ತದ ವಿದ್ಯಾರ್ಥಿ ವೇತನವನ್ನ ಪಡೆಯಬೇಕು ಅನ್ನೋ ಆಸೆ ಎಲ್ಲರಿಗಿರುತ್ತದೆ. ಆದರೆ ಈ ಕನಸು ಎಲ್ಲಾ ವಿದ್ಯಾರ್ಥಿಗಳಿಂದ ಸಾಕಾರ ಮಾಡಿಕೊಳ್ಳಲು ಸಾಧ್ಯವಾಗೋದಿಲ್ಲ. ಈ ಕನಸು ನನಸಾಗಬೇಕು ಅಂದರೆ ಸರಿಯಾದ ಯೋಜನೆ ಹಾಗೂ ಪರಿಶ್ರಮದ ಅಗತ್ಯವಿದೆ.

ಇಷ್ಟೆಲ್ಲ ಪ್ರಯತ್ನಪಟ್ಟ ಬಳಿಕ ವಿದ್ಯಾರ್ಥಿವೇತನ ಸಿಕ್ಕರೂ ಸಹ ಕೆಲವರಿಗೆ ಅದು ಅವರ ನಿರೀಕ್ಷೆಯ ಮಟ್ಟ ತಲುಪದ ಕಾರಣ ತೃಪ್ತಿ ಎನಿಸೋದಿಲ್ಲ.

ಆದರೆ ಡೆನಿಶಾ ಹಾಗೂ ಡೆಸ್ಟಿನಿ ಎಂಬ ಅವಳಿ ಸಹೋದರಿಯರು ಈ ಮಾತನ್ನ ಸುಳ್ಳು ಮಾಡಿದ್ದಾರೆ. ಇವರಿಬ್ಬರೂ ತರಗತಿಯಲ್ಲಿ ಮೊದಲ ಅಂಕ ಪಡೆಯುವ ಮೂಲಕ 24 ಮಿಲಿಯನ್​ ಡಾಲರ್​​​ಗೂ ಅಧಿಕ ಮೊತ್ತದ ವಿದ್ಯಾರ್ಥಿ ವೇತನವನ್ನ ಪಡೆದಿದ್ದಾರೆ.

ಅಮೆರಿಕದ ಲೂಸಿಯಾನದ ಪ್ರೌಢಶಾಲೆಯಲ್ಲಿ ಈ ಅವಳಿ ಸಹೋದರಿಯರು ವ್ಯಾಸಂಗ ಮಾಡುತ್ತಿದ್ದಾರೆ. ಈ ಇಬ್ಬರು ಸಹೋದರಿಯರು ಓದೋದ್ರಲ್ಲಿ ತುಂಬಾನೇ ಜಾಣೆಯರು. ಇದರ ಜೊತೆಯಲ್ಲಿ ಇವರು ಸಾಂಸ್ಕೃತಿಕ ಚಟುವಟಿಕೆ ಹಾಗೂ ಎಮೆರ್ಜೆನ್ಸಿ ಮೆಡಿಸಿನ್​ ಪ್ರೋಗ್ರಾಂನಲ್ಲೂ ಚಾಕಚಕ್ಯತೆ ಹೊಂದಿದ್ದಾರೆ.

ಡೆನಿಶಾ ಉತ್ತಮ ಬರಹಗಾರ್ತಿ ಹಾಗೂ ರೊಬೊಟಿಕ್ಸ್ ಮತ್ತು ಪಜಲ್​​ನಲ್ಲಿ ನಿಪುಣೆಯಾಗಿದ್ದಾಳೆ. ಡೆಸ್ಟಿನಿ ಗಣಿತ ಹಾಗೂ ನೃತ್ಯದಲ್ಲಿ ಜಾಣೆಯಾಗಿದ್ದಾಳೆ. ವಿದ್ಯಾರ್ಥಿಯಾಗಿದ್ದಾಗ ಏನಾದರೂ ಸಾಧಿಸಬೇಕು ಎಂಬ ಹಂಬಲ ಹೊಂದಿರುವವವರಿಗೆ ಈ ಸಹೋದರಿಯರು ಕೆಲ ಸಲಹೆಗಳನ್ನ ನೀಡಿದ್ದಾರೆ. ನೀವು ಏನನ್ನು ಸಾಧಿಸಬೇಕು ಎಂದು ಅಂದುಕೊಳ್ತಿರೋ ಅದನ್ನೆಲ್ಲ ಸಾಧಿಸಿ ಎಂದು ಡೆನಿಶಾ ಹಾಗೂ ಡೆಸ್ಟಿನಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...