alex Certify ಕೊರೊನಾದಿಂದ ಕೆಲಸ ಕಳೆದುಕೊಂಡರೂ ಮರೆಯಾಗಿಲ್ಲ ಈತನ ಮಂದಹಾಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾದಿಂದ ಕೆಲಸ ಕಳೆದುಕೊಂಡರೂ ಮರೆಯಾಗಿಲ್ಲ ಈತನ ಮಂದಹಾಸ

ಕೊರೋನಾ ವೈರಸ್‌ ಸಾಂಕ್ರಮಿಕವು ಎಲ್ಲರಿಗೂ ಬಹಳ ಸಂಕಷ್ಟ ತಂದಿತ್ತಿದೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ಕೆಲಸ ಕಳೆದುಕೊಂಡಿರುವ ಅನೇಕರಿಗೆ ಎರಡು ಹೊತ್ತಿನ ಊಟಕ್ಕೂ ತೀರಾ ಕಷ್ಟ ಪಡುವಂತಾಗಿಬಿಟ್ಟಿದೆ.

ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ರಿಟೇಲ್‌ ಸ್ಟೋರ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ ಲುಸಿನ್‌ಡಿಸೋ ಮಲ್ಗಾಸ್ ಹೆಸರಿನ ಈ ವ್ಯಕ್ತಿ ಕೋವಿಡ್-19 ಸಂಕಷ್ಟದಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಮೂರು ಮಕ್ಕಳಿರುವ ಮಲ್ಗಾಸ್ ಈ ಸಂದರ್ಭವನ್ನು ಕನಸಿನಲ್ಲೂ ಊಹಿಸಿರಲಿಲ್ಲ.

ಇಷ್ಟೆಲ್ಲಾ ಆದರೂ ಸಹ ತಮ್ಮ ಸಕಾರಾತ್ಮಕತೆಯನ್ನು ಬಿಟ್ಟುಕೊಡದ ಮಲ್ಗಾಸ್, ಮುಖದ ಮೇಲೊಂದು ಮಂದಹಾಸ ಬೀರುತ್ತಾ, ಬಹಳ ಆಕರ್ಷಕ ಕ್ಯಾಪ್ಷನ್‌ಗಳಿರುವ ಪ್ಲಕಾರ್ಡ್‌ಗಳನ್ನು ಹಿಡಿದುಕೊಂಡು ಬೀದಿ ಬೀದಿಗಳಲ್ಲಿ ಪಾದಚರಿಗಳ ಗಮನ ಸೆಳೆಯುತ್ತಿದ್ದಾರೆ. ‘sign_diso’ ಹೆಸರಿನಲ್ಲಿ ಇನ್‌ಸ್ಟಗ್ರಾಂನಲ್ಲಿ ಪೇಜ್‌ ನಡೆಸುತ್ತಿರುವ ಮಲ್ಗಾಸ್, ಬಹಳ ಫನ್ನಿ ಪ್ಲಕಾರ್ಡ್‌ಗಳನ್ನು ಹಿಡಿದುಕೊಂಡಿರುವ ತಮ್ಮ ಚಿತ್ರಗಳನ್ನು ಅಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...