alex Certify ಮ್ಯೂಸಿಯಂನಲ್ಲಿ ಕದ್ದಿದ್ದ ಮಾರ್ಬಲ್‌ ನ್ನು ಮೂರು ವರ್ಷದ ಬಳಿಕ ಹಿಂದಿರುಗಿಸಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮ್ಯೂಸಿಯಂನಲ್ಲಿ ಕದ್ದಿದ್ದ ಮಾರ್ಬಲ್‌ ನ್ನು ಮೂರು ವರ್ಷದ ಬಳಿಕ ಹಿಂದಿರುಗಿಸಿದ ಮಹಿಳೆ

ಅಮೆರಿಕದ ಪ್ರವಾಸಿಯೊಬ್ಬರು ತಾವು ಮೂರು ವರ್ಷಗಳ ಹಿಂದೆ ರೋಮನ್ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ಕದ್ದಿದ್ದ ಮಾರ್ಬಲ್‌ ಕಲ್ಲೊಂದನ್ನು ಮ್ಯೂಸಿಯಂಗೆ ಹಿಂದಿರುಗಿಸಿದ್ದಾರೆ.

2017ರಲ್ಲಿ ತಮ್ಮ ಭೇಟಿಯ ವೇಳೆ ಕದ್ದಿದ್ದ ಈ ಮಾರ್ಬಲ್ ಕಲ್ಲಿನೊಂದಿಗೆ ಕ್ಷಮಾಪಣಾ ಪತ್ರವನ್ನೂ ಸಹ ಈ ಪ್ರವಾಸಿ ಬರೆದುಕೊಟ್ಟಿದ್ದಾರೆ. ತನ್ನದಲ್ಲದ ವಸ್ತುವನ್ನು ತಾನು ತೆಗೆದುಕೊಂಡು ಹೋಗಿದ್ದು ದೊಡ್ಡ ತಪ್ಪಾಗಿದೆ ಎಂದು ಪತ್ರದಲ್ಲಿ ಒಪ್ಪಿಕೊಂಡಿದ್ದಾರೆ ಈ ಪ್ರವಾಸಿ.

ಕಲ್ಲಿನ ಮೇಲೆ ಬರೆಯಲಾಗಿದ್ದ ‘To Sam, love Jess, Rome 2017’ ಸಂದೇಶವನ್ನು ತಾನೆಷ್ಟು ಪ್ರಯತ್ನಿಸಿದರೂ ಅಳಿಸಲು ಸಾಧ್ಯವಾಗದೇ ಹೋಗಿದ್ದಾಗಿ ಈ ಪತ್ರದಲ್ಲಿ ಬರೆದಿದ್ದಾರೆ ಜೆಸ್ ಹೆಸರಿನ ಈ ಮಹಿಳೆ. ತನಗೀಗ ಇನ್ನಷ್ಟು ಪ್ರಬುದ್ಧತೆ ಬೆಳೆದಿದ್ದು, ತಾನು ಮಾಡಿದ್ದು ತಪ್ಪಾಗಿದೆ ಎಂಬ ಅರಿವು ಮೂಡಿದ್ದಾಗಿ ಹೇಳಿಕೊಂಡಿದ್ದಾರೆ ಜೆಸ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...