alex Certify ಹಸಿವು ತಾಳಲಾರದೆ‌ ನೋಟು ತಿಂದ ಶ್ವಾನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸಿವು ತಾಳಲಾರದೆ‌ ನೋಟು ತಿಂದ ಶ್ವಾನ…!

ನಾಯಿಗಳು ತಮ್ಮ ನಿಯತ್ತಿನಿಂದ ಮಾನವನ ಬೆಸ್ಟ್‌ ಫ್ರೆಂಡ್ ಆಗಿವೆ ಎಂದು ಎಲ್ಲರಿಗೂ ಗೊತ್ತು. ಅದರೆ ಇದೇ ನಾಯಿಗಳು ಮರಿಗಳಾಗಿದ್ದ ವೇಳೆ ಬಹಳ ತುಂಟತನ ಮಾಡುತ್ತಾ ಬಲೇ ಕಿರಿಕಿರಿ ಮಾಡುವ ಸಾಕಷ್ಟು ನಿದರ್ಶನಗಳನ್ನು ಅವುಗಳನ್ನು ಸಾಕುವ ಪ್ರತಿಯೊಬ್ಬರೂ ಕಂಡಿದ್ದಾರೆ.

ಕಣ್ಣಿಗೆ ಕಂಡದ್ದನ್ನೆಲ್ಲಾ ಅಗಿದು ಹಾಕುವ ತುಂಟ ನಾಯಿಯೊಂದು ಹೊಟ್ಟೆ ಹಸಿವು ಆಗಿದ್ದಕ್ಕೋ ಏನೋ, ತನ್ನ ಮಾಲೀಕರು ಕೂಡಿಟ್ಟಿದ್ದ 100 ಪೌಂಡ್‌ (9,800 ರೂ.ಗಳು) ದುಡ್ಡನ್ನು ಅಗಿದು ಹಾಕಿಬಿಟ್ಟಿದೆ.

ಐಲ್ ಆಫ್ ಮ್ಯಾನ್‌ ಎಂಬ ಊರಿನ ಜೋಸೆಲಿನ್ ಹಾರ್ನೆ ಕೆಲ ದಿನಗಳಿಂದ ಕೂಡಿಟ್ಟ ಹಣವನ್ನು ತಮ್ಮ ಹಾಸಿಗೆ ಪಕ್ಕದ ಮಡಿಕೆಯೊಂದರಲ್ಲಿ ಇಟ್ಟಿದ್ದರು. ಆಕೆಯ ಸಾಕು ನಾಯಿ ಪೆಗ್ಗಿ ಅದರಲ್ಲಿ ಇಟ್ಟಿದ್ದ ನೋಟುಗಳನ್ನೆಲ್ಲಾ ಜಗಿದು ಹಾಕಿಬಿಟ್ಟಿದೆ. ಈ ಘಟನೆಯ ವಿಡಿಯೋ ರೆಕಾರ್ಡಿಂಗ್‌ ಈ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...