alex Certify ನೋಡುಗರನ್ನು ದಂಗುಬಡಿಸುತ್ತೆ ಆಮೆಗಳ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡುಗರನ್ನು ದಂಗುಬಡಿಸುತ್ತೆ ಆಮೆಗಳ ಈ ವಿಡಿಯೋ

ಇದನ್ನ ಬೇಕಿದ್ದರೆ ನೀವು ಆಮೆ ಸುನಾಮಿ ಎಂದು ಕರೆಯಿರಿ..! ವನ್ಯಜೀವಿ ಸಂರಕ್ಷಣಾ ಸೊಸೈಟಿ ಬ್ರೆಜಿಲ್​ನ ಅಮೆಜಾನ್​ ನದಿಯ ಉಪನದಿಯಾದ ಪುರುಸ್ ನದಿಯ ಉದ್ದಕ್ಕೂ ಸಂರಕ್ಷಿತ ಪ್ರದೇಶದ ಮರಳು ಕಡಲತೀರದಲ್ಲಿ ದಕ್ಷಿಣ ಅಮೆರಿಕದ ಆಮೆಗಳು ಬರುತ್ತಿರುವ ಅದ್ಭುತ ವಿಡಿಯೋವನ್ನ ಬಿಡುಗಡೆ ಮಾಡಿದೆ.

ಕೇವಲ ಒಂದು ದಿನದಲ್ಲಿ ಸುಮಾರು 71 ಸಾವಿರ ಮರಿಗಳು ಹೊರಹೊಮ್ಮಿದವು ಹಾಗೂ ಕೆಲ ದಿನಗಳ ಬಳಿಕ ಮತ್ತೆ 21 ಸಾವಿರ ಆಮೆಗಳು ಹೊರಹೊಮ್ಮಿವೆ.

ಈ ಅದ್ಭುತ ದೃಶ್ಯ ರಿಸರ್ವಾ ಬಯೋಲಾಜಿಕಾ ಡೋ ಅಬುಫಾರಿಯಲ್ಲಿ ಕಂಡು ಬಂದಿದೆ. ಡಬ್ಲೂ ಸಿಎಸ್​ನ ಬ್ರೆಜಿಲ್​ ಸಂರಕ್ಷಣಾಧಿಕಾರಿಗಳು ವಯಸ್ಕ ಹೆಣ್ಣು ಆಮೆಗಳ ಮೇಲೆ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಮಾಂಸ ಹಾಗೂ ಮೊಟ್ಟೆಗಳ ಕಳ್ಳ ಸಾಗಣಿಕೆಯನ್ನ ತಡೆಗಟ್ಟುವ ಸಲುವಾಗಿ ಈ ಅಳಿವಿನಂಚಿನಲ್ಲಿರುವ ಪ್ರಬೇಧಗಳ ನಿರ್ವಹಣೆ ಹಾಗೂ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...