alex Certify ಈ ಚಿತ್ರದಲ್ಲಿರುವ ಬೆಕ್ಕನ್ನು ತಕ್ಷಣವೇ ಗುರುತಿಸಬಲ್ಲಿರಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಚಿತ್ರದಲ್ಲಿರುವ ಬೆಕ್ಕನ್ನು ತಕ್ಷಣವೇ ಗುರುತಿಸಬಲ್ಲಿರಾ…?

ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ಬರುವ ಚಾಲೆಂಜ್‌ ನ್ನು ಒಪ್ಪಿಕೊಳ್ಳುವುದು ಸುಲಭ. ಆದರೆ ಅದನ್ನು ಪೂರೈಸುವುದು ಕಷ್ಟದ ಕೆಲಸ. ಇತ್ತೀಚೆಗೆ ಬೆಕ್ಕು ಹುಡುಕುವ ಚಾಲೆಂಜ್‌ ಬಂದಿದ್ದು, ಅನೇಕರ ತಲೆಯಲ್ಲಿ ಹುಳವನ್ನು ಬಿಟ್ಟಿದ್ದು ಸುಳ್ಳಲ್ಲ.

ಹೌದು, ಬುಕ್‌ ರೋ ಹಾಗೂ ಟಿವಿ ಸ್ಟಾಂಡ್‌ನಲ್ಲಿ ಒಂದು ಬೆಕ್ಕಿದ್ದು, ಅದನ್ನು ಹುಡುಕಬೇಕು ಎಂದು ಟ್ವೀಟರ್‌ ಬಳಕೆದಾರರು ಚಾಲೆಂಜ್‌ ಹಾಕಿದರು. ಈ ಪೋಸ್ಟ್‌ ಹಾಕುತ್ತಿದ್ದಂತೆ, ಬೆಕ್ಕನ್ನು ಹುಡುಕಲು ನೆಟ್ಟಿಗರು ಶುರು ಮಾಡಿದರು. ಆದರೆ ಅನೇಕರಿಗೆ ಇದರಲ್ಲಿ ಯಶಸ್ಸು ಸಿಗಲಿಲ್ಲ.

ಕೆಲವರು ಭಾರಿ ಪ್ರಯತ್ನಪಟ್ಟರೂ ಸಿಗಲಿಲ್ಲವೆಂದರೆ, ಇನ್ನು ಕೆಲವರು ಇಲ್ಲಿ ಬೆಕ್ಕು ಎಲ್ಲಿದೆ ಎಂದು ಪ್ರಶ್ನಿಸಿದರು. ಮತ್ತೂ ಕೆಲವರು, ನಮ್ಮ ಮನೆಯವರೆಲ್ಲ ಹುಡುಕಿದರೂ ಬೆಕ್ಕು ಮಾತ್ರ ಕಾಣಿಸಲಿಲ್ಲ ಎನ್ನುವ ಉತ್ತರ ನೀಡಿದರು.

ಆದರೆ ನಿಜವಾಗಿ ಬೆಕ್ಕು ಚಿತ್ರದಲ್ಲಿರುವ ಟಿವಿಯ ಕೆಳಗಿರುವ ಜಾಗದಲ್ಲಿ ಕೂತಿರುವುದನ್ನು ಕಾಣಬಹುದು. ಕಾಟೆ ಹಿಂಡ್ಸ್‌ ಎನ್ನುವವರು ಹಾಕಿರುವ ಈ ಫೋಟೋ ಇದೀಗ ಭಾರಿ ವೈರಲ್‌ ಆಗಿದ್ದು, ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...