alex Certify ಬಾಹ್ಯಾಕಾಶದಲ್ಲಿ ತಲೆ ತೊಳೆಯೋದು ಅಂದ್ರೆ ಸುಲಭದ ಮಾತಲ್ಲ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಹ್ಯಾಕಾಶದಲ್ಲಿ ತಲೆ ತೊಳೆಯೋದು ಅಂದ್ರೆ ಸುಲಭದ ಮಾತಲ್ಲ…..!

ಗಗನಯಾತ್ರಿಯಾಗಿ ಕೆಲಸ ಮಾಡೋದು ಎಷ್ಟು ಮಜವಾಗಿ ಇರುತ್ತೆ ಅನ್ನೋ ಅಭಿಪ್ರಾಯ ಅನೇಕರಲ್ಲಿದೆ. ಆದರೆ ಈ ಕೆಲಸ ಎಷ್ಟೊಂದು ಸವಾಲಿನದ್ದು ಅನ್ನೋದು ಗಗನಯಾತ್ರಿಗಳಿಗೇ ಗೊತ್ತು. ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಯೊಬ್ಬರು ಶಾಂಪೂ ಹಾಕಿ ತನ್ನ ಕೂದಲನ್ನೂ ಕಷ್ಟಪಟ್ಟು ತೊಳೆಯುತ್ತಿರುವ ಹಳೆಯ ವಿಡಿಯೋ ಇದೀಗ ವೈರಲ್​ ಆಗಿದೆ.

ನಾಸಾ ಗಗನಯಾತ್ರಿ ಕರೆನ್​ ನೈಬರ್ಗ್​ ತಮ್ಮ ಕೂದಲನ್ನ ಬಾಹ್ಯಾಕಾಶದಲ್ಲಿ ತೊಳೆದುಕೊಳ್ಳೋಕೆ ಹರಸಾಹಸ ಪಟ್ಟಿದ್ದಾರೆ. ತಲೆಯ ಮೇಲೆ ನೀರು ಹಾಕಿಕೊಂಡ್ರೆ ಶೂನ್ಯ ಗುರುತ್ವಾಕರ್ಷಣ ಬಲದಿಂದಾಗಿ ನೀರು ತೇಲೋಕೆ ಆರಂಭಿಸುತ್ತೆ. ತೇಲುತ್ತಿರುವ ನೀರಿನಲ್ಲೇ ಗಗನಯಾತ್ರಿ ಕಷ್ಟಪಟ್ಟು ಕೂದಲನ್ನ ವಾಶ್​ ಮಾಡಿಕೊಳ್ತಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಾ ಇದ್ದಂತೆ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಅನೇಕರು ನೀವಲ್ಲಿ ಲಾಂಡ್ರಿ ಹೇಗೆ ಮಾಡಿಕೊಳ್ತೀರಾ ಅಂತಾ ಕೇಳಿದ್ರೆ…..ಇನ್ನೂ ಕೆಲವರು ನೀವು ಸ್ನಾನದ ನೀರನ್ನ ಕುಡಿಯುತ್ತೀರಾ ಅಂತಾ ಪ್ರಶ್ನೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...