
ನಾಸಾ ಗಗನಯಾತ್ರಿ ಕರೆನ್ ನೈಬರ್ಗ್ ತಮ್ಮ ಕೂದಲನ್ನ ಬಾಹ್ಯಾಕಾಶದಲ್ಲಿ ತೊಳೆದುಕೊಳ್ಳೋಕೆ ಹರಸಾಹಸ ಪಟ್ಟಿದ್ದಾರೆ. ತಲೆಯ ಮೇಲೆ ನೀರು ಹಾಕಿಕೊಂಡ್ರೆ ಶೂನ್ಯ ಗುರುತ್ವಾಕರ್ಷಣ ಬಲದಿಂದಾಗಿ ನೀರು ತೇಲೋಕೆ ಆರಂಭಿಸುತ್ತೆ. ತೇಲುತ್ತಿರುವ ನೀರಿನಲ್ಲೇ ಗಗನಯಾತ್ರಿ ಕಷ್ಟಪಟ್ಟು ಕೂದಲನ್ನ ವಾಶ್ ಮಾಡಿಕೊಳ್ತಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಾ ಇದ್ದಂತೆ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಅನೇಕರು ನೀವಲ್ಲಿ ಲಾಂಡ್ರಿ ಹೇಗೆ ಮಾಡಿಕೊಳ್ತೀರಾ ಅಂತಾ ಕೇಳಿದ್ರೆ…..ಇನ್ನೂ ಕೆಲವರು ನೀವು ಸ್ನಾನದ ನೀರನ್ನ ಕುಡಿಯುತ್ತೀರಾ ಅಂತಾ ಪ್ರಶ್ನೆ ಮಾಡಿದ್ದಾರೆ.