alex Certify ಪುಟ್ಟ ಕಂದಮ್ಮನಿಗೆ ಉಗುರುಗಳ ಶೃಂಗಾರ: ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಯ್ತು ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಕಂದಮ್ಮನಿಗೆ ಉಗುರುಗಳ ಶೃಂಗಾರ: ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಯ್ತು ಫೋಟೋ

ಪುಟ್ಟ ಕಂದಮ್ಮಗಳ ಬಗ್ಗೆ ಎಷ್ಟು ಕಾಳಜಿ ವಹಿಸಿದ್ರೂ ಕಡಿಮೆಯೇ. ಅವುಗಳ ಚರ್ಮ ತುಂಬಾನೇ ಸೂಕ್ಷ್ಮವಾಗಿರೋದ್ರಿಂದ ಅವುಗಳ ಉಗುರುಗಳನ್ನ ಕಾಲ ಕಾಲಕ್ಕೆ ಕತ್ತರಿಸಬೇಕು. ಆದರೆ ಸೋಶಿಯಲ್​ ಮೀಡಿಯಾದಲ್ಲಿ ಪುಟ್ಟ ಕಂದಮ್ಮನ ಕೈಗೆ ನಕಲಿ ಉಗುರುಗಳನ್ನ ಅಂಟಿಸಿರುವ ಫೋಟೋವೊಂದು ಸಾಕಷ್ಟು ವಿವಾದವನ್ನ ಸೃಷ್ಟಿಸಿದೆ.

ಫೇಸ್​ಬುಕ್​ನಲ್ಲಿ ಶೇರ್​ ಮಾಡಲಾದ ಫೋಟೋದಲ್ಲಿ ನಕಲಿ ಉಗುರುಗಳಿಂದ ಮಗುವಿನ ಕೈಯನ್ನ ಅಲಂಕರಿಸಲಾಗಿದ್ದು, ಈ ಕೈಯನ್ನ ಮಹಿಳೆ ಹಿಡಿದುಕೊಂಡಿದ್ದಾಳೆ. ಈ ಫೋಟೋಗೆ ನಾನು ಮಕ್ಕಳ ಉಗುರನ್ನೂ ಕಡಿಮೆ ದರದಲ್ಲಿ ಅಲಂಕರಿಸಬಲ್ಲೆ ಎಂದು ಶೀರ್ಷಿಕೆ ನೀಡಲಾಗಿದೆ.

ಆದರೆ ಈ ಫೋಟೋವನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಲಾಗಿದ್ದು ಮಗುವಿಗೆ ಮಾಡಲಾದ ಈ ಮೆನಿಕ್ಯೂರ್​ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಇದು ತುಂಬಾನೆ ಅಪಾಯಕಾರಿ. ಮಗು ಪದೇ ಪದೇ ತನ್ನ ಕಣ್ಣು , ಮೂಗು ಬಾಯಿಗಳನ್ನ ಮುಟ್ಟಿಕೊಳ್ತಾನೇ ಇರುತ್ತೆ. ಹೀಗಾಗಿ ಇಂತಹ ಕೆಲಸ ಮಾಡಬಾರದು ಅಂತಾ ಕಮೆಂಟ್​ ಮಾಡಲಾಗಿದೆ.

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...