ಡಬಲ್ ರೂಪಾಂತರಿ ಹಾಗೂ ತ್ರಿಬಲ್ ರೂಪಾಂತರಿ ಕೊರೊನಾ ವೈರಸ್ಗಳಿಂದ ತಪ್ಪಿಸಿಕೊಳ್ಳೋದು ಹೇಗೆ ಅನ್ನೋದೇ ಒಂದು ದೊಡ್ಡ ಸವಾಲಾಗಿದೆ. ಈ ಕೊರೊನಾದಿಂದ ಪಾರಾಗಲು ಎರಡೆರಡು ಮಾಸ್ಕ್ಗಳನ್ನ ಧರಿಸಿ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಅಮೆರಿಕದ ಸೆಂಟರ್ ಡಿಸೀಸ್ ಕಂಟ್ರೋಲ್ನ ತಜ್ಞರು ಕೊರೊನಾದಿಂದ ಪಾರಾಗಲು ಡಬಲ್ ಮಾಸ್ಕ್ಗಳನ್ನ ಧರಿಸೋದು ಹೆಚ್ಚು ಸೂಕ್ತ ಎಂದು ಹೇಳಿದ್ದಾರೆ.
ಮಾಸ್ಕ್ನ ಪದರಗಳು ಹೆಚ್ಚಾಗೋದ್ರಿಂದ ವೈರಸ್ ದೇಹಕ್ಕೆ ಪ್ರವೇಶಿಸುವ ಪ್ರಮಾಣ ಕಡಿಮೆಯಾಗುತ್ತೆ. ಅಧ್ಯಯನದ ಪ್ರಕಾರ ಡಬಲ್ ಮಾಸ್ಕ್ನಿಂದ ಕೊರೊನಾ ಹರಡುವ ಪ್ರಮಾಣ 85 ರಿಂದ 95 ಪ್ರತಿಶತ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.
ವೈಜ್ಞಾನಿಕವಾಗಿ ಹೆಚ್ಚಿನ ಪದರಗಳುಳ್ಳ ಮಾಸ್ಕ್ಗಳು ವೈರಾಣುಗಳಿಗೆ ಕಠಿಣ ಸವಾಲನ್ನ ನೀಡುತ್ತವೆ. ಸಾರ್ವಜನಿಕ ವಾಹನ, ಜನನಿಬಿಡ ಪ್ರದೇಶ, ಮಾರ್ಕೆಟ್, ಆಸ್ಪತ್ರೆಗಳಂತಹ ಪ್ರದೇಶಗಳಲ್ಲಿ ಡಬಲ್ ಮಾಸ್ಕ್ಗಳನ್ನ ಧರಿಸೋದು ಹೆಚ್ಚು ಸೂಕ್ತ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ನೀವು ಕೂಡ ಈ ಮಾರ್ಗವನ್ನ ಬಳಸೋದಾದ್ರೆ ಮಾಸ್ಕ್ಗಳನ್ನ ಸರಿಯಾದ ವಿಧಾನದಲ್ಲಿ ಹಾಕೋದನ್ನ ಮರೆಯದಿರಿ, ಡಬಲ್ ಮಾಸ್ಕ್ಗಳನ್ನ ಸರಿಯಾದ ರೀತಿಯಲ್ಲಿ ಹಾಕಿಕೊಂಡಲ್ಲಿ ನಿಜಕ್ಕೂ ಪರಿಣಾಮಕಾರಿ ಎಂದು ತಜ್ಞರು ಸಲಹೆ ನೀಡಿದ್ದಾರೆ.