alex Certify ಭದ್ರತಾ ಪಡೆಯ ನಾಯಿಗೆ ಅದ್ಧೂರಿ ʼಬೀಳ್ಕೊಡುಗೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭದ್ರತಾ ಪಡೆಯ ನಾಯಿಗೆ ಅದ್ಧೂರಿ ʼಬೀಳ್ಕೊಡುಗೆʼ

ಜಗತ್ತಿನಾದ್ಯಂತ ಕಾನೂನು ಪಾಲನಾ ಪಡೆಗಳು ಹಾಗೂ ಮಿಲಿಟರಿ ಪಡೆಗಳಲ್ಲಿ ಅವಿಭಾಜ್ಯ ಅಂಗವಾಗಿ ಇರುವ ಶ್ವಾನ ದಳಗಳ ಬಗ್ಗೆ ಸಾಕಷ್ಟು ಓದಿದ್ದೇವೆ ಹಾಗೂ ಕೇಳಿದ್ದೇವೆ.

ಬಾಂಬ್ ‌ಗಳಿಂದ ಹಿಡಿದು ಅಪರಾಧಿಗಳು ಬಿಟ್ಟು ಹೋದ ಸುಳಿವುಗಳ ಜಾಡು ಹಿಡಿಯುವವರೆಗೂ ಈ ಶ್ವಾನಗಳಿಗೆ ಬಹಳ ನಾಜೂಕಾಗಿ ತರಬೇತಿ ನೀಡಲಾಗಿರುತ್ತದೆ. ಈ ಶ್ವಾನಗಳೊಂದಿಗೆ ಅವುಗಳ ಟ್ರೇನರ್ ‌ಗಳು ಹಾಗೂ ಪಡೆಗಳ ಸಿಬ್ಬಂದಿಗೆ ಭಾವನಾತ್ಮಕ ಸಂಬಂಧವೂ ಬೆಳೆದುಬಿಟ್ಟಿರುತ್ತದೆ.

ಅಮೆರಿಕದ ಇಂಡಿಯಾನಾ ಪೊಲೀಸ್ ವಿಮಾನ ನಿಲ್ದಾಣದಲ್ಲಿ ಭದ್ರತಾ ಪಡೆಗಳ ಜೊತೆಗೆ ಎಂಟು ವರ್ಷಗಳ ಕಾಲ ಕೆಲಸ ಮಾಡಿದ ಶ್ವಾನ ಟಿರಾಡೋ ಸೇವೆಯಿಂದ ನಿವೃತ್ತನಾಗಿದ್ದಾನೆ. ಈ ಸಂದರ್ಭದಲ್ಲಿ ಆತನಿಗೆ ಅದ್ಧೂರಿ ಸಮಾರಂಭವೊಂದನ್ನು ಏರ್ಪಡಿಸಿ ಬೀಳ್ಕೊಡಲಾಗಿದೆ. ಈ ಸಮಾರಂಭದ ವಿಡಿಯೋವನ್ನು ಕಂಡ ನೆಟ್ಟಿಗರು ಶ್ವಾನಕ್ಕೆ ಸಿಕ್ಕ ಗೌರವವನ್ನು ಮೆಚ್ಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...