alex Certify ದಂತ ವೈದ್ಯರಿಗೆ ಮಹತ್ವದ ಸೂಚನೆ ನೀಡಿದ WHO | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂತ ವೈದ್ಯರಿಗೆ ಮಹತ್ವದ ಸೂಚನೆ ನೀಡಿದ WHO

ದಿನ ದಿನಕ್ಕೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾಗೆ ಚಿಕಿತ್ಸೆ ನೀಡುವ ವೈದ್ಯರೇ ಕೊರೊನಾಗೆ ಬಲಿಯಾಗಿದ್ದಾರೆ. ಈ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ ದಂತ ವೈದ್ಯರಿಗೆ ಎಚ್ಚರಿಕೆ ನೀಡಿದೆ.

ದಂತ ವೈದ್ಯರಿಗೆ ಕೊರೊನಾ ಕಾಡುವ ಅಪಾಯ ಹೆಚ್ಚಿದೆ ಎಂದು ಡಬ್ಲುಎಚ್ ಒ ಹೇಳಿದೆ. ಇದಕ್ಕಾಗಿ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದೆ. ಸಾಮಾನ್ಯ ಚೆಕಪ್ ನಿಂದ ದೂರವಿರುವಂತೆ ವೈದ್ಯರಿಗೆ ಹೇಳಲಾಗಿದೆ. ಕೊರೊನಾ ನಿಯಂತ್ರಣಕ್ಕೆ ಬರುವವರೆಗೂ ಮೌಖಿಕ ಚಿಕಿತ್ಸೆಯಿಂದ ದೂರವಿರಿ ಎಂದು ಡಬ್ಲ್ಯುಎಚ್ ಒ ಹೇಳಿದೆ.

ಅಗತ್ಯವಿದ್ರೆ ಫೋನ್ ಅಥವಾ ವಿಡಿಯೋ ಕಾಲ್ ಮೂಲಕ ರೋಗಿಗಳನ್ನು ಭೇಟಿ ಮಾಡಿ ಚಿಕಿತ್ಸೆ ನೀಡಿ ಎಂದಿದೆ. ವೈದ್ಯರು ಸಾಮಾನ್ಯವಾಗಿ ಬೇಗ ಸೋಂಕಿಗೆ ಒಳಗಾಗ್ತಾರೆ. ದಂತ ವೈದ್ಯರಿಗೆ ರೋಗಿಗಳ ಲಾಲಾರಸದಿಂದ ಅಪಾಯ ಬೇಗ ಹರಡುವ ಸಾಧ್ಯತೆಯಿದೆ ಎಂದು ಡಬ್ಲ್ಯುಎಚ್ ಒ ಹೇಳಿದೆ. ತುರ್ತು ಪರಿಸ್ಥಿತಿಯಲ್ಲಿ ಮಾತ್ರ ವೈದ್ಯರು ಚಿಕಿತ್ಸೆ ನೀಡಬೇಕು. ಮಾತ್ರೆಯಿಂದ ಗುಣವಾಗುವ ಸಮಸ್ಯೆಯಾಗಿದ್ದರೆ ರೋಗಿಗಳ ಭೇಟಿಯಾಗಬಾರದು ಎಂದು ಡಬ್ಲ್ಯುಎಚ್ ಒ ಹೇಳಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...