ದಕ್ಷಿಣ ಚೀನಾ ಭಾಗದ ಸಮುದ್ರವೊಂದರಲ್ಲಿ ಕೆಸರಿನ ರಾಶಿಯಲ್ಲಿ ಸಿಲುಕಿದ್ದ ಡಾಲ್ಫಿನ್ನ್ನ ಮೀನುಗಾರರು ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಗುವಾಂಗ್ಸಿ ಪ್ರಾಂತ್ಯದ ಕ್ಸಿಲಿ ಬೇ ಪಟ್ಟಣದ ಹೊರವಲಯದಲ್ಲಿರುವ ಸಮುದ್ರದಲ್ಲಿ ಸೋಮವಾರ ಈ ಘಟನೆ ಸಂಭವಿಸಿದೆ.
ಕೆಸರಿನಿಂದ ಬಿದ್ದು ಏಳಲಾಗದೇ ಒದ್ದಾಡುತ್ತಿದ್ದ ಡಾಲ್ಫಿನ್ನ್ನ ಗಮನಿಸಿದ ಮೀನುಗಾರರು ಈ ಬಗ್ಗೆ ಕೋಸ್ಟ್ ಗಾರ್ಡ್ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಡಾಲ್ಫಿನ್ ನ್ನ ರಕ್ಷಣೆ ಮಾಡಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ರಕ್ಷಣಾ ಕಾರ್ಯದ ವಿಡಿಯೋ ವೈರಲ್ ಆಗಿದೆ.
ಕೆಸರಿನಲ್ಲಿ ಸಿಲುಕಿದ್ದ ಡಾಲ್ಫಿನ್ ಮೈ ಮೇಲೆ ನೀರು ಹಾಕಿ ಬಳಿಕ ಅದನ್ನ ಬಿಳಿ ಶೀಟ್ನ ಸಹಾಯದಿಂದ ಎತ್ತಿ ಸಮುದ್ರಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ. ಸಮುದ್ರದ ಅಲೆಯಲ್ಲಿ ಈಜುತ್ತಿದ್ದ ಡಾಲ್ಫಿನ್ ಪದೇ ಪದೇ ದಡದ ಬಳಿಗೆ ಬಂದು ತನ್ನನ್ನ ಕಾಪಾಡಿದ ಜನಕ್ಕೆ ಧನ್ಯವಾದ ಹೇಳಿದೆ. ಡಾಲ್ಫಿನ್ ಸಮುದ್ರದ ಆಳದಲ್ಲಿ ಮರೆಯಾಗುವವರೆಗೂ ಕಾದ ಮೀನುಗಾರರು ಬಳಿಕ ಸ್ಥಳದಿಂದ ವಾಪಸ್ಸಾಗಿದ್ದಾರೆ.