alex Certify ನೆಟ್ಟಿಗರ ಹೃದಯ ಗೆದ್ದ ನವದಂಪತಿಗಳ ಹೃದಯಸ್ಪರ್ಶಿ ನಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಹೃದಯ ಗೆದ್ದ ನವದಂಪತಿಗಳ ಹೃದಯಸ್ಪರ್ಶಿ ನಡೆ

ಮಂದಿಮಾಗಧರ ಹೃದಯ ಗೆಲ್ಲುವಂಥ ಸಣ್ಣ-ಪುಟ್ಟ ಕಥೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ನೋಡುತ್ತಲೇ ಇರುತ್ತೇವೆ. ಇದೀಗ ಅಂಥದ್ದೇ ಒಂದು ನಿದರ್ಶನವೊಂದು ವೈರಲ್ ಆಗಿದೆ.

ಏಪ್ರಿಲ್‌ನಲ್ಲಿ ನಡೆದ ಈ ಘಟನೆಯಲ್ಲಿ, ಚರ್ಚ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವದಂಪತಿಗಳು ತೋರಿದ ಹೃದಯಸ್ಪರ್ಶಿ ಘಟನೆಯೊಂದು ಹೃದಯ ಬೆಚ್ಚಗಾಗಿಸಿದೆ. ಈ ಸಮಾರಂಭದಲ್ಲಿ ಮದುವೆಯಾಗುತ್ತಿದ್ದ ದಂಪತಿಗಳಿಗೆ ಉಂಗುರಗಳನ್ನು ತಂದುಕೊಡಲು ಡೌನ್ ಸಿಂಡ್ರೋಮ್ ಇರುವ ಇಬ್ಬರು ಮಕ್ಕಳನ್ನು ಕರೆತಂದಿದ್ದರು.

ನೈನ್ಸ್‌ ಧಿರಿಸಿನಲ್ಲಿ ಮಿಂಚುತ್ತಿರುವ ಈ ಪುಟಾಣಿ ಮಕ್ಕಳು ಮದುಮಗಳ ವಿದ್ಯಾರ್ಥಿಗಳು. ಮಕ್ಕಳಿಬ್ಬರೂ ತಮ್ಮ ಬಳಿಗೆ ಬರುತ್ತಿದ್ದಂತೆಯೇ ಮದುಮಗಳ ಕಣ್ಣಾಲಿಗಳಲ್ಲಿ ಆನಂದಭಾಷ್ಪ ಬರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಯೂಟ್ಯೂಬರ್‌ ಜನಾ ಹಿಶಮ್ ಈ ವಿಡಿಯೋವನ್ನು ಸೆರೆ ಹಿಡಿದಿದ್ದು ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...