ಕರೊನಾ ವೈರಸ್ನಿಂದಾಗಿ ಮನೆಯಿಂದ ಹೊರಬರೋಕೆ ಅನೇಕರು ಹೆದರಿಕೊಳ್ತಾರೆ. ಆದರೆ ಮನೆಯಲ್ಲೇ ಇದ್ದು ಟೈಂ ಪಾಸ್ ಮಾಡಬೇಕು ಅಂತಾ ತಮ್ಮ ಪ್ರತಿಭೆಗಳನ್ನ ಹೊರಹಾಕ್ತಿದ್ದಾರೆ. ಅದೇ ರೀತಿ ವೃದ್ಧನೊಬ್ಬ ಡಿಫರೆಂಟ್ ಆಗಿ ಹೇರ್ ಸ್ಟೈಲ್ ಮಾಡಿಕೊಳ್ತಿರುವ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದು ನೆಟ್ಟಿಗರು ಫುಲ್ ಖುಶ್ ಆಗಿದ್ದಾರೆ .
ಅಂದಹಾಗೆ ಈ ವೃದ್ಧ ಹೇರ್ಸ್ಟೈಲ್ ಮಾಡಿಕೊಂಡಿರೋದು ವ್ಯಾಕ್ಯುಮ್ ಕ್ಲೀನರ್ನಲ್ಲಿ. ಇವರ ಮೊಮ್ಮಗ ಈ ವಿಡಿಯೋ ಪೋಸ್ಟ್ ಮಾಡಿದ್ದು, ನನ್ನ ತಾತ ವ್ಯಾಕ್ಯೂಮ್ ಕ್ಲೀನರ್ನಲ್ಲೂ ಹೇರ್ ಸ್ಟೈಲ್ ಮಾಡಿಕೊಳ್ಳಬಲ್ಲರು ಅಂತಾ ಕ್ಯಾಪ್ಶನ್ ಕೂಡ ಹಾಕಿದ್ದಾರೆ. 8 ಸೆಕೆಂಡ್ನ ವಿಡಿಯೋದಲ್ಲಿ ವೃದ್ಧ ತರಹೇವಾರಿ ಹೇರ್ಸ್ಟೈಲ್ ಮಾಡಿಕೊಂಡಿದ್ದು ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.