alex Certify ಹಳೆಯ ಸೀರೆಯುಲ್ಲಿಯೂ ವಿಭಿನ್ನವಾಗಿ, ಸುಂದರವಾಗಿ ಕಾಣಲು ಅನುಸರಿಸಿ ಈ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳೆಯ ಸೀರೆಯುಲ್ಲಿಯೂ ವಿಭಿನ್ನವಾಗಿ, ಸುಂದರವಾಗಿ ಕಾಣಲು ಅನುಸರಿಸಿ ಈ ಟಿಪ್ಸ್

ಎಷ್ಟೇ ಬೆಲೆ ಬಾಳುವ ಸೀರೆಯಾದರೂ 3 ರಿಂದ 4 ಬಾರಿ ಉಟ್ಟ ನಂತರ ಧರಿಸಲು ಇಷ್ಟವಾಗುವುದಿಲ್ಲ. ಪಾರ್ಟಿಗಳಲ್ಲಿ, ಮದುವೆಗಳಲ್ಲಿ ಪ್ರತಿಯೊಬ್ಬರೂ ಹೊಸ ಹೊಸ ಡಿಸೈನ್ ವಿಭಿನ್ನ ಫ್ಯಾಷನ್ ಬಟ್ಟೆಗಳನ್ನು ಧರಿಸಲು ಬಯಸುತ್ತಾರೆ. ಹಾಗಾಗಿ ಹೊಸ ಸೀರೆ ಉಡಲು ಇಷ್ಟಪಡುತ್ತಾರೆ. ಆದರೆ ನೀವು ಹಳೆಯ ಸೀರೆ ಉಟ್ಟರೂ ಡಿಫರೆಂಟ್ ಆಗಿ ಕಾಣಲು ಈ ಸಲಹೆ ಅನುಸರಿಸಿ.

ಹಳೆಯ ಸೀರೆಯಲ್ಲಿ ಸೊಗಸಾಗಿ ಕಾಣಲು ಸರಿಯಾದ ಆಭರಣವನ್ನು ಧರಿಸಿ. ಅದು ನಿಮ್ಮ ನೋಟದಲ್ಲಿ ವ್ಯತ್ಯಾಸವನ್ನುಂಟುಮಾಡುತ್ತದೆ. ನೀವು ಸೀರೆಯೊಂದಿಗೆ ಹೊಸ ರೂಪದ ಸ್ಟೇಟ್ ಮೆಂಟ್ ಆಭರಣಗಳನ್ನು ಧರಿಸಿದರೆ ಅದು ನಿಮ್ಮ ನೋಟವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ.

ಹಳೆಯ ಸೀರೆಗಳಿಗೆ ಹೊಸ ಡಿಸೈನರ್ ಬ್ಲೌಸ್ ಅನ್ನು ಧರಿಸಿ. ಇದು ನಿಮ್ಮ ಸೀರೆಗೆ ಉತ್ತಮ ನೋಟವನ್ನು ನೀಡುತ್ತದೆ. ನೀವು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

ಇತ್ತೀಚಿನ ದಿನಗಳಲ್ಲಿ ಸೀರೆಗಳನ್ನು ಹಲವು ಶೈಲಿಯಲ್ಲಿ ಧರಿಸುತ್ತಾರೆ. ನೀವು ಸಹ ಅದನ್ನು ಅನುಸರಿಸುವುದಾದರೆ ನಿಮ್ಮ ಹಳೆಯ ಸೀರೆಯನ್ನು ಹೊಸ ರೀತಿಯಲ್ಲಿ ಒಳ್ಳೆ ಬ್ಲೌಸ್ ನೊಂದಿಗೆ ಧರಿಸಿ.

ನೀವು ಮೇಕಪ್ ಮತ್ತು ಕೇಶವಿನ್ಯಾಸಕ್ಕೂ ಹೆಚ್ಚು ಗಮನ ಕೊಡಬೇಕು. ಇದು ನಿಮ್ಮ ನೋಟದ ಮೇಲೆ ದೊಡ್ಡ ಪರಿಣಾಮವನ್ನುಂಟು ಮಾಡುತ್ತದೆ.

ಹಳೆಯ ಸೀರೆಯೊಂದಿಗೆ ನೀವು ಹೊಸ ಶೈಲಿಯ ಮೇಕಪ್ ಮತ್ತು ಕೇಶ ವಿನ್ಯಾಸ ಮಾಡಿ. ಇದು ಉತ್ತಮ ನೋಟವನ್ನು ನೀಡುತ್ತದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...